ಮೈಸೂರಿನಲ್ಲಿ ಶೇ 100ರಷ್ಟು ನರೇಗಾ ಯಶಸ್ವಿ: ಪ್ರಧಾನಿ ಮೋದಿ ಅವರ 8 ವರ್ಷದ ಸಾಧನೆ ಬಗ್ಗೆ ಶಾಸಕ ಎಸ್.ಎ ರಾಮದಾಸ್ ಗುಣಗಾನ

ಮೈಸೂರು,ಜೂನ್,4,2022(www.justkannada.in):  ಪ್ರಧಾನಿ ನರೇಂದ್ರ ಮೋದಿಯವರ 8ವರ್ಷದ ಸಾಧನೆಗಳ  ಬಗ್ಗೆ  ಶಾಸಕ ಎಸ್.ಎ ರಾಮದಾಸ್ ಕೊಂಡಾಡಿದರು.

ಕೇಂದ್ರ ಸರ್ಕಾರದ 8 ವರ್ಷದ ಸಾಧನೆಗಳ ಕುರಿತು ಮೈಸೂರು ಜನಪ್ರತಿನಿಧಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಶಾಸಕ. ಎಸ್.ಎ ರಾಮದಾಸ್, 8 ವರ್ಷಗಳ ಕಾಲದಲ್ಲಿ ಭಾರತದ ಗೌರವ, ಘನತೆ ಹೆಚ್ಚಾಗಿದೆ. ಮೈಸೂರಿನಲ್ಲಿ ಶೇ 100ರಷ್ಟು ನರೇಗಾ ಯಶಸ್ವಿಯಾಗಿದೆ. ಬಡವರಿಗೆ 5ಕೋಟಿ ಮನೆ ಮಂಜೂರು ಮಾಡಲಾಗಿದೆ‌. ಪ್ರಧಾನ ಮಂತ್ರಿ ಅವಾಜ್ ಯೋಜನೆಯಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ. ಭಾರತ 2025ಕ್ಕೆ 5ಬಿಲಿಯನ್ ಡಾಲರ್ ಎಕಾನಮಿ ಹೊಂದುತ್ತೆ ಎಂದರು.

ಜನೌಷಧಿ ಕೇಂದ್ರಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗಿವೆ. ಕೇಂದ್ರದ ಜನೌಷಧ ಬಳಕೆಯಲ್ಲಿ ಮೈಸೂರು 7ನೇ ಸ್ಥಾನದಲ್ಲಿದೆ. ಮೈಸೂರಿಗೆ 1600ಕೋಟಿ ಹಣವನ್ನು ಪೇಪರ್ ಮಿಲ್ ಅಭಿವೃದ್ಧಿಗೆ ನೀಡಿದ್ದಾರೆ. ಪ್ರಸಾದ್ ಯೋಜನೆಯಲ್ಲಿ 5 ದೇವಸ್ಥಾನಗಳ ಅಭಿವೃದ್ಧಿ ಮಾಡಲಾಗ್ತಿದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ 50ಕೋಟಿ ಅನುದಾನ ನೀಡಲಾಗಿದೆ‌. ಕೇಂದ್ರ ಸರ್ಕಾರ ಗ್ರಾ.ಪಂಗಳ ಬಲವರ್ಧನೆಗೆ ಒತ್ತು ನೀಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಅಂಗವಾಗಿ ಪ್ರಧಾನ ಮಂತ್ರಿಗಳ 8ನೇ ವರ್ಷದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡ್ತಿದ್ದೇವೆ ಎಂದು ಶಾಸಕ ಎಸ್‌.ಎ.ರಾಮದಾಸ್ ಹೇಳಿದರು.

ಸುದ್ದಿಗೋ಼ಷ್ಠಿ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್ ನಾಗೇಂದ್ರ ಉಪಸ್ಥಿತರಿದ್ದರು.

Key words: MLA- SA Ramdas – talks -about -PM Modi’s -8-year- achievement

ENGLISH SUMMARY…

MGNREGA 100% successful in Mysuru: MLA S.A. Ramadas praises PM Modi’s 8 years achievements
Mysuru, June 4, 2022 (www.justkannada.in): MLA S.A. Ramadas today praised Prime Minister Narendra Modi’s achievements in the last eight years.
He addressed a press meeting on the occasion of the completion of the BJP’s eight years of power at the center. “The respect and dignity of our country have increased at the world level in the last eight years. MGNREGA program has been 100% successful in Mysuru in the last eight years. Five crore houses have been sanctioned for the poor in Mysuru. Karnataka has made a significant achievement in the Prime Minister Awas Yojana. India will become a 5 billion dollar economy by 2025,” he said.
Mysuru District In-charge Minister S. T. Somashekar, MP Pratap Simha, MLAs S.A. Ramadas, L. Nagendra, and others were present at the press meet.
Keywords: BJP/ MLA S.A. Ramadas/ PM Modi/ appreciates/ 8 years