ಮೈಸೂರು, ಜುಲೈ 19, 2020 (www.justkannada.in):ಮೈ ಸೂರು ನಗರ ಪಾಲಿಕೆ ವಾಣಿಜ್ಯ ತೆರಿಗೆ ಮನ್ನ ಮಾಡುವಂತೆ ಶಾಸಕ ಸಾರಾ ಮಹೇಶ್ ಮನವಿ ಮಾಡಿದ್ದಾರೆ.
ಈ ಸಂಬಂಧ ನಗರಾಭಿವೃಧಿ ಸಚಿವರಿಗೆ ಮಾಜಿ ಸಚಿವ ಸಾರಾ.ಮಹೇಶ್ ಮಹೇಶ್ ಪತ್ರ ಬರೆದಿದ್ದಾರೆ.
ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯನ್ನು ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಮನವಿ ಮಾಡಲಾಗಿತ್ತು. ಸರ್ಕಾರ ನಮ್ಮ ಮನವಿಯನ್ನು ಪುರಸ್ಕಾರ ನೀಡಿಲ್ಲ.
ರಾಜ್ಯದ ಹಲವು ಜಿಲ್ಲೆಯಲ್ಲಿ ಲಾಕ್ಡೌನ್ ಮಾಡಲಾಗಿದೆ. ಕೊರಾನಾ ದಿಂದಾಗಿ ನಗರ ಪ್ರದೇಶದಲ್ಲಿ ವಾಣಿಜ್ಯ ವಹಿವಾಟು ಕುಸಿದಿದೆ. ಈ ವೇಳೆ ಪಾಲಿಕೆ ಕಂದಾಯ ಕಟ್ಟಲು ಕಷ್ಟ ಆಗಿದೆ ಎಂದು ಪತ್ರ ಬರೆದು ಮನವಿ ಮಾಡಿಕೊಂಡ ಸಾ.ರಾ.ಮಹೇಶ್