ಮೈಸೂರು,ಮಾರ್ಚ್,24,2025 (www.justkannada.in): ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರಿ ಚರ್ಚೆಯಾಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಶ್ರೀವತ್ಸ, ಹನಿಟ್ರ್ಯಾಪ್ ಸಂಬಂಧ ರಾಜಣ್ಣ ಏಕೆ ದೂರು ನೀಡಿಲ್ಲ ಹೇಳಬೇಕು? ಹನಿಟ್ರ್ಯಾಪ್ ಸಂಬಂಧ ಈವರಗೆ ಯಾಕೆ ದೂರು ದಾಖಲಿಸಿಲ್ಲ ಇದು ಸಿಎಂ ಕುರ್ಚಿ ಭದ್ರಪಡಿಸುವ ತಂತ್ರವೇ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಶ್ರೀವತ್ಸ, ರಾಜಣ್ಣ ಹಾಗೂ ರಾಜಣ್ಣ ಪುತ್ರ ಸದನದಲ್ಲೇ ಹೇಳಿದ್ದಾರೆ. 48 ಮಂದಿ ಕೇಂದ್ರ ನಾಯಕರು ಇದ್ದಾರೆ ಎಂದಿದ್ದಾರೆ. ಅದರಲ್ಲಿ ಇರುವ ನಾಯಕರು ಯಾರು? ಇದರ ಹಿಂದೆ ಯಾರಿದ್ದಾರೆ ಎಂಬುದರ ಸಮಗ್ರ ತನಿಖೆ ನಡೆಯಬೇಕು. ಸಿಡಿ ಫ್ಯಾಕ್ಟರಿಯ ಮಾಲೀಕ ಯಾರು ಪತ್ತೆ ಆಗಬೇಕು? ಹರೀಶ್ ಗೌಡ ಅವರ ವಿರುದ್ಧವೂ ಹನಿಟ್ರ್ಯಾಪ್ ಆಗಿತ್ತು. ಈ ಹಿಂದೆ ಕಬ್ಬನ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು ಎಂದರು.
ವಿಧಾನಸಭೆ, ವಿಧಾನಪರಿಷತ್ ನಲ್ಲಿ ಈ ಹಿಂದೆಯೂ ಹಲವು ಘಟನೆ ನಡೆದಿವೆ. ಈ ಹಿಂದೆ ಕೂಡ ಹಲವರ ಸಸ್ಪೆಂಡ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಬೆಳೆಸುವ ಹುನ್ನಾರ ಇದು. ಬಿಜೆಪಿ ಬಗ್ಗು ಬಡಿಯುವ ಪ್ಲಾನ್ ಇದು. ಹನಿಟ್ರ್ಯಾಪ್ ನಿಜಕ್ಕೂ ಮಾಡಿದ್ದಾರಾ? ಎಲ್ಲಿದೆ ಸಿಡಿ, ತಪ್ಪು ಮಾಡಿದವರನ್ನ ಹೊರ ತನ್ನಿ ಜನಬಯಸುವ ಜನಪ್ರತಿನಿಧಿ ಯಾರೂ ಇಲ್ಲ. ಶುದ್ಧ ರಾಜಕಾರಣಿಗಳು ಯಾರು ಗೊತ್ತಾಗಲಿ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಆಗಲಿ ಎಂದು ಶಾಸಕ ಶ್ರೀವತ್ಸ ಆಗ್ರಹಿಸಿದರು.
Key words: complaint, honeytrap, MLA, Srivatsa