ಮೈಸೂರು,ಆಗಸ್ಟ್,14,2024 (www.justkannada.in): ಶ್ರೀವತ್ಸ ಒಬ್ಬ ಅಚಾನಕ್ ಶಾಸಕ. ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿಯೇ ಇಲ್ಲ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎ ವೆಂಕಟೇಶ್, ಮುಡಾ ಹಗರಣವನ್ನ ಮುಂದಿಟ್ಟು ಸಖಾ ಸುಮ್ಮನೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಶ್ರೀವತ್ಸ ಒಬ್ಬ ಅಚಾನಕ್ ಶಾಸಕ. ಚುನಾವಣೆ ಸಂದರ್ಭದಲ್ಲಿ ಎಂ.ಕೆ ಸೋಮಶೇಖರ್ ಅವರ ಗೆಲುವಿನ ಅತೀ ಹೆಚ್ಚು ಆತ್ಮವಿಶ್ವಾಸ ಇವರ ಗೆಲುವಿಗೆ ಕಾರಣ ಆಯ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಒಪ್ಪಿಕೊಳ್ಳೋಣ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಬರಿ ಹಿಂದುತ್ವ ಅಂತ ಕೇವಲ ಪ್ರತಿಭಟನೆಗಳನ್ನ ಮಾಡಿಕೊಂಡು ಸುಮ್ಮನಿದ್ದಾರೆ ಎಂದು ಟೀಕಿಸಿದರು.
ಶ್ರೀವತ್ಸ ಅವರು ಮಾಡೋ ಕೆಲಸ ಎರಡೇ. ಒಂದು ವಿಧಾನಸೌಧಕ್ಕೆ ಹೋಗೋದು ಮತ್ತೊಂದು ಸ್ಥಳೀಯ ಕಾರ್ಯಕ್ರಮಗಳಲ್ಲಿ ಶಿಷ್ಟಚಾರದ ಪ್ರಯುಕ್ತ ವೇದಿಕೆಗಳಲ್ಲಿ ಕೂರೋದು. ಹೀಗಾಗಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ಶ್ರೀವತ್ಸ ಅವರಿಗಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿಯೇ ಇಲ್ಲ. ಈಗಲೂ ಕೆ.ಆರ್ ಕ್ಷೇತ್ರದ ಶಾಸಕ ಅಂತ ಹೇಳಿದ್ರೆ ಎಂಕೆ ಸೋಮಶೇಖರ್ ಸೋತರೂ ಪ್ರತಿ ದಿನ ಕ್ಷೇತ್ರದ ಜನರ ನಡುವೆ ಇರುತ್ತಾರೆ. ಶ್ರೀವತ್ಸ ಅವರು ಹಿಂದುತ್ವ, ಅದು ಇದು ಅಂತ ಪ್ರತಿಭಟನೆಗಳಲ್ಲಿ ಕಾಲ ವ್ಯರ್ಥ ಮಾಡುತ್ತಿದ್ದಾರೆ ಎಂದು ನುಡಿದರು.
ಸಿದ್ದರಾಮಯ್ಯ ಅವರ ಬಗ್ಗೆ ಲಘುವಾಗಿ ಹೇಳಿರುವ ನೀಡಿರುವ ಶ್ರೀವತ್ಸ ಇನ್ನು ಮುಂದೆ ಯಾವತ್ತೂ ಶಾಸಕರಾಗಲ್ಲ ವಿಧಾನಸೌಧದ ಮೆಟ್ಟಿಲು ತುಳಿಯಲಿಕ್ಕಾಗಲ್ಲ. ಇದು ಅವರ ಅಂತಿಮ ವಿಧಾನಸಭಾ ಯಾತ್ರೆ ಇದನ್ನ ಬರೆದಿಟ್ಟುಕೊಳ್ಳಿ ನಾನು ಭವಿಷ್ಯ ಹೇಳುತ್ತೇನೆ. ಜನರ ಕೆಲಸ ಮಾಡಿ,ಜನರ ಅಭಿಮಾನ ಗಳಿಸಿ ಅಂದರೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತೀರಾ ನಿಮಗೆ ಜನ ಬುದ್ದಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
Key words: MLA, Srivatsa, never worked, development, H.A Venkatesh