ಬೆಂಗಳೂರು,ಮಾರ್ಚ್,5,2025 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಹಿನ್ನೆಲೆಯಲ್ಲಿ ಈ ಕುರಿತು ಸದನದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.
ಈ ಕುರಿತು ಸದನದಲ್ಲಿ ಮಾತನಾಡಿರುವ ಶಾಸಕ ಸುನೀಲ್ ಕುಮಾರ್, ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ನಮ್ಮ ಪಾರ್ಟಿಯಲ್ಲೂ ರಾಜ್ಯಾಧ್ಯಕ್ಷ ಯಾರು ಅಂತಾ ಚರ್ಚೆಯಾಗುತ್ತಿದೆ. ಆದರೆ ನಾವು ರಾಜ್ಯದಲ್ಲಿ ಜನರನ್ನ ಪ್ರತಿನಿಧಿಸಲ್ಲ ಆದರೆ ಮುಖ್ಯಮಂತ್ರಿಗಳು ರಾಜ್ಯದ ಜನರ ಸಿಎಂ. ಅವರ ಬದಲಾವಣೆ ಅಂತಾ ಚರ್ಚೆಯಾದರೇ ಏನಾಗುತ್ತದೆ? ಜನರಿಗೆ ತಪ್ಪು ಸಂದೇಶ ಹೋಗಲ್ವೆ..? ಎಂದು ಕುಟುಕಿದ್ದಾರೆ.
ಪರಮೇಶ್ವರ್ ದೆಹಲಿಗೆ ಹೋಗಿ ಬಂದರು. ನಾನು ಸಿಎಂ ಆಗ್ತೇನೆ ಅಂದರು ಮತ್ತೊಂದೆಡೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾರೆ. ಇದರಿಂದ ಜನರಿಗೆ ಅಸ್ಥಿರತೆ ಭಾವನೆ ಇದೆ. ಬಜೆಟ್ ನಂತರ ರಾಜ್ಯದ ಕರಿಮಣಿ ಮಾಲೀಕ ಯಾರು? ಇದು ನಮಗೆ ಎದ್ದಿರುವ ಪ್ರಶ್ನೆ. ಮೊದಲು ಈ ಅಸ್ಥಿರತೆಯನ್ನು ಹೋಗಲಾಡಿಸಿ ಎಂದು ಶಾಸಕ ಸುನೀಲ್ ಕುಮಾರ್ ಹರಿಹಾಯ್ದರು.
Key words: discussing, CM, change, wrong message, MLA, Sunil Kumar