ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಟಿಎಸ್. ಶ್ರೀವತ್ಸ ಚಾಲನೆ

ಮೈಸೂರು,ಏಪ್ರಿಲ್,28,2025 (www.justkannada.in): ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ  ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನಕ್ಕೆ ಕೃಷ್ಣರಾಜ ಕ್ಷೇತ್ರದ ಟಿಎಸ್. ಶ್ರೀವತ್ಸ ಅವರು ಚಾಲನೆ ನೀಡಿದರು.

ಮೈಸೂರಿನ‌ ವಿವಿಧ ಬಡಾವಣೆಯ 150ಕ್ಕೂ ಹೆಚ್ಚು ಬ್ರಾಹ್ಮಣರು ನೊಂದಣಿಯಾಗಿ ಸದಸ್ಯರಾದರು. ಈ ವೇಳೆ ಮಾತನಾಡಿದ ಶಾಸಕ ಟಿಎಸ್. ಶ್ರೀವತ್ಸ, ಬ್ರಾಹ್ಮಣರು ಸಂಘಟಿತರಾಗಿ ಒಗ್ಗೂಡಲು ಪ್ರತಿಯೊಬ್ಬ ವಿಪ್ರರು ಕಡ್ಡಾಯವಾಗಿ ವಿಪ್ರ ಸಂಘಸಂಸ್ಥೆಗಳ ಮಾತೃ ಸಂಸ್ಥೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರಾಗಲು ಮುಂದಾಗಬೇಕು, ಮೈಸೂರಿನ ಬ್ರಾಹ್ಮಣ ಸಂಘ ಸಂಸ್ಥೆಗಳಲ್ಲಿ ಬ್ರಾಹ್ಮಣ ಯುವ ವೇದಿಕೆಯ  ಪದಾಧಿಕಾರಿಗಳ ತಂಡ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನವನ್ನ ನಿರಂತರವಾಗಿ ನಡೆಸಲು ಯೋಜಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶಿಕ್ಷಣ, ಉದ್ಯೋಗ, ವೈದ್ಯಕೀಯ, ಸಹಕಾರಿ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಪ್ರೋತ್ಸಾಹ ನೀಡಲು ಬ್ರಾಹ್ಮಣ ಮಹಸಭಾ ರಾಜ್ಯಾಧ್ಯಕ್ಷರಾದ ರಘುನಾಥ್ ನೇತೃತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಈ ವೇಳೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ.ಲಕ್ಷ್ಮೀದೇವಿ,  ಹಿರಿಯ ಸಮಾಜಸೇವಕ ಕೆ. ರಘುರಾಮ ವಾಜಪೇಯಿ,  ವಿಪ್ರ ಮುಖಂಡ  ಶ್ರೀಕಂಠ ಕುಮಾರ್,  ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಎಚ್ ಎನ್  ಶ್ರೀಧರ್ ಮೂರ್ತಿ,  ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್,  ಖಜಾಂಜಿ ಅಜಯ್ ಶಾಸ್ತ್ರಿ,  ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಖಜಾಂಚಿ ಕೆ ನಾಗರಾಜ್,  ಸುಚೇಂದ್ರ,  ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕವಿಜಯ್ ಕುಮಾರ್, ಗುರುರಾಜ್,  ಮಂಜುನಾಥ್,  ಉಮೇಶ್,  ಗಣೇಶ್ ಪ್ರಸಾದ್, ಓಂ ಶ್ರೀನಿವಾಸ್,  ವಿ .ಎನ್ ಕೃಷ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Key words: MLA, TS. Srivatsa, All Karnataka Brahmin Mahasabha, membership, Mysore