ಬೆಂಗಳೂರು,ಏಪ್ರಿಲ್,25,2025 (www.justkannada.in): ನನ್ನ ಮೇಳೆ ಇಡಿ ದಾಳಿಯಾಗಿದ್ದು ರಾಜಕೀಯ ಷಡ್ಯಂತ್ರ ಎಂದು ಮಾಜಿ ಸಚಿವ ಹಾಗೂ ಶಾಸಕ ವಿನಯ್ ಕುಲಕರ್ಣಿ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ವಿನಯ್ ಕುಲಕರ್ಣಿ, ಇಡಿಯವರು ಈಗಾಗಲೇ ನನ್ ಮೇಲೆ ಏನೇನ್ ಕೇಸ್ ಹಾಕಬೇಕು, ಹೇಗೆ ಕಿರುಕುಳ ಕೊಡಬಹುದು ಎಲ್ಲ ಕೊಟ್ಟಿದ್ದಾರೆ. ಯಾವೆಲ್ಲಾ ಕೇಸ್ ಹಾಕಬೇಕೋ ಎಲ್ಲಾ ಕೇಸ್ ಹಾಕಿದ್ದಾರೆ. ನಾನು ರೈತ ಯಾವುದೇ ವ್ಯಾಪಾರ ಮಾಡಿಲ್ಲ. ಮನೆಯಲ್ಲಿ ದಾಖಲೆ ಪರಿಶೀಲನೆ ವೇಳೆ ಇಡಿಗೆ ಏನೂ ಸಿಕ್ಕಿಲ್ಲ. ಹೈಕೋರ್ಟ್ ನಲ್ಲಿ ನಾನು ಸಾಕ್ಷಿದಾರನಾಗಿದ್ದೇನೆ. ಕೇಲವು ಕೇಸ್ ಗೆ ಅಡ್ಡಿಪಡಿಸಲು ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಒಂದು ತಿಂಗಳಿನಿಂದ ನನಗೆ ಕಿರುಕುಳ ನೀಡಲಾಗಿದೆ. ಶಾಸಕನಾಗಿ ನಾನು ನನ್ನ ಕ್ಷೇತ್ರಕ್ಕೆ ಹೋಗಲು ಆಗತ್ತಿಲ್ಲ . ಯಾರೇ ಆಗಲಿ ಜನರಿಗೆ ಮೋಸ ಮಾಡೋದು ಒಳ್ಳೇಯದಲ್ಲ ಐಶ್ವರ್ಯ ಗೌಡ ಖಾತೆಗೆ ಹಣ ವರ್ಗವಾಣೆಯಾಗಿದ್ದರೆ ಸಿಕ್ಕೇ ಸಿಗುತ್ತೆ. ಪ್ರತಿಯೊಂದಕ್ಕೂ ನಾನೇ ಟಾರ್ಗೆಟ್ ಆಗಿದ್ದೇನೆ, ಕಿರುಕುಳಕ್ಕೂ ಒಂದು ಮಿತಿ ಇರುತ್ತೆ ಎಂದು ವಿನಯ್ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.
Key words: ED, raid, political conspiracy, against, me, MLA, Vinay Kulkarni