ಉಚ್ಚಾಟನೆ ಮಾಡ್ತಾರಾ ಉನ್ನತ ಸ್ಥಾನ ಕೊಡ್ತಾರಾ ಕಾದು ನೋಡಿ- ಕುಮಾರ್ ಬಂಗಾರಪ್ಪ

ಬೆಳಗಾವಿ,ಡಿಸೆಂಬರ್,2,2024 (www.justkannada.in):  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಉತ್ತರ ನೀಡುತ್ತಾರೆ. ಉಚ್ಚಾಟನೆ ಮಾಡುತ್ತಾರಾ, ಉನ್ನತ ಸ್ಥಾನ ಕೊಡ್ತಾರಾ ಕಾದು ನೋಡಿ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರ್ ಬಂಗಾರಪ್ಪ, ಯಾವ ಕಾರಣಕ್ಕೆ ನೋಟಿಸ್ ಕೊಟ್ಟಿದ್ದಾರೆ ಗೊತ್ತಿಲ್ಲ.  ನೋಟಿಸ್ ಗೆ ಯತ್ನಾಳ್ ಉತ್ತರ ಕೊಡುತ್ತಾರೆ. ವಕ್ಫ್ ವಿಚಾರವಾಗಿ ನೋಟಿಸ್ ಕೊಟ್ಟಿಲ್ಲ ವೈಯಕ್ತಿಕವಾಗಿ ನೋಟಿಸ್ ನೀಡಿದ್ದಾರೆ.  ವಕ್ಫ್ ವಿರುದ್ದದ ಹೋರಾಟಕ್ಕೂ ಈ ನೋಟಿಸ್  ಗೂ ಸಂಬಂಧವಿಲ್ಲ. ವಿಜಯೇಂದ್ರ ಎಷ್ಟು ಬಾರಿ ದೆಹಲಿಗೆ  ಹೋಗಿದ್ದಾರೆ.  ವಿಜಯೇಂದ್ರ ಅವರೇ ನೋಟಿಸ್ ಕೊಡಿಸಿದ್ದಾರೆ ಅನ್ನೋಕೆ ಆಗಲ್ಲ ಎಂದರು.

ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಸತತವಾಗಿ ನಡೆಯುತ್ತಿದೆ. ಸಂಪೂರ್ಣ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ  ಹಗುರವಾಗಿ ಚುನಾವಣೆ  ತೆಗೆದುಕೊಂಡವು ಅನ್ನೋದು ಅಕ್ಷಮ್ಯ ಅಪರಾಧ. ನಮ್ಮ ಅಮಾಯಕ ಕಾರ್ಯಕರ್ತರನ್ನ ವಜಾ ಮಾಡಲಾಗಿದೆ. ಹೀಗೆ ಮಾಡಿದರೆ ಪಕ್ಷಸಂಘಟನೆ ಹೇಗೆ ಸಾಧ್ಯ? ಎಂದು ಕುಮಾರ ಬಂಗಾರಪ್ಪ ಪ್ರಶ್ನಿಸಿದರು.

Key words: MLA, Yatnal, Notic, BJP, Kumar Bangarappa