ಹುಬ್ಬಳ್ಳಿ,ಜುಲೈ,25,2023(www.justkannada.in): ಕೆಲ ಸಚಿವರ ವಿರುದ್ಧ 20ಕ್ಕೂ ಹೆಚ್ಚು ಸ್ವಪಕ್ಷದ ಶಾಸಕರು ಸಿಎಂಗೆ ದೂರು ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಸಿದ್ಧರಾಮಯ್ಯ. ನನಗೆ ಶಾಸಕರು ಯಾವುದೇ ದೂರು ನೀಡಿಲ್ಲ. ರಾಹುಲ್ ಗಾಂಧಿ ಪ್ರವಾಸ ಹಿನ್ನೆಲೆ ಸಭೆ ಮುಂದೂಡಲಾಗಿತ್ತು. ಗುರುವಾರಕ್ಕೆ ಶಾಸಕಾಂಗ ಸಭೆ ನಿಗದಿಯಾಗಿದೆ. ಶಾಸಕಾಂಗ ಸಭೆ ಕರೆಯುವಂತೆ ಶಾಸಕರು ಸಲಹೆ ನೀಡಿದ್ದಾರೆ ಎಂದರು.
ಸರ್ಕಾರ ಬೀಳಿಸಲು ವಿದೇಶದಲ್ಲಿ ತಂತ್ರ ರೂಪಿಸಲಾಗುತ್ತಿದೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ,. ಸರ್ಕಾರ ಅತಂತ್ರಗೊಳಿಸುವ ಬಗ್ಗೆ ನನಗೆ ಗೊತ್ತಿಲ್ಲ ಅಪರೇಷನ್ ಬಗ್ಗೆ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದು ಹೇಳಿದರು.
Key words: MLAs- not given -any complaint-CM Siddaramaiah.