ನಮ್ಮದು ಗಂಜಲ ಕುಡಿಯುವ ರಾಜ್ಯ ಅಲ್ಲ, ನಂದಿನಿ ಹಾಲು ಕುಡಿಯುವ ರಾಜ್ಯ: ಬಿಜೆಪಿ ಟೀಕೆಗೆ ಬಿ.ಕೆ ಹರಿಪ್ರಸಾದ್ ಟಾಂಗ್

ಬೆಂಗಳೂರು,ಏಪ್ರಿಲ್,12,2025 (www.justkannada.in): ಜಾತಿಗಣತಿ ವರದಿ ಮಂಡನೆ ತುಪ್ಪ ಸವರುವ ಕೆಲಸ ಎಂದು ಟೀಕಿಸಿದ್ದ ಬಿಜೆಪಿಗೆ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿ.ಕೆ ಹರಿಪ್ರಸಾದ್, ಜಾತಿಗಣತಿ ಬಗ್ಗೆ ಟೀಕೆ ಟಿಪ್ಪಣಿ ಸಾಮಾನ್ಯ . ನಮ್ಮದು ಗಂಜಲ ಕುಡಿಯವ ರಾಜ್ಯ ಅಲ್ಲ, ನಮ್ಮದು ನಂದಿನಿ ಹಾಲು ಕುಡಿಯುವ ರಾಜ್ಯ.  ಗಂಜಲ ಕುಡಿಯುವವರಿಗೆ ತುಪ್ಪ ಸವರುವ ಕೆಲಸ ಇರಬಹುದು ಎಂದು ಟಾಂಗ್ ಕೊಟ್ಟರು.

ಶೇ 93 ರಷ್ಟು ಜನಸಂಖ್ಯೆಗೆ ಅನುಗುಣವಾಗಿ ಗಣತಿ ಮಾಡಿದ್ದಾರೆ. ಜಾತಿಗಣತಿ ವಿರೋಧ ಮಾಡುವುದು ನಿಜಕ್ಕೂ ವಿಪರ್ಯಾಸ. ಏಪ್ರಿಲ್ 7 ರಂದು ಏನಾಗುತ್ತೆ ಎಂದು ನೋಡೋಣ. ಜಾತಿ ಜನಗಣತಿ ವರದಿ ಜಾರಿಗೆ ತರುವ ವಿಚಾರ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು. ಅದೇ ಕಾರಣಕ್ಕೆ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಈ ಮೊದಲೇ ಜಾತಿಜನಗಣತಿ ಮಂಡನೆಯಾಗಬೇಕಿತ್ತು. ಆದರೂ ಈಗ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವುದು ಸ್ವಾಗತಾರ್ಹ ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.

Key words: MLC, BK Hariprasad, BJP, caste census report