ಶಾಸಕ ಮುನಿರತ್ನ ಭೇಟಿಯಾಗಿ ಚರ್ಚಿಸಿದ MLC ಸಿ.ಟಿ ರವಿ

ಬೆಂಗಳೂರು,ಡಿಸೆಂಬರ್, 27,2024 (www.justkannada.in):  ಆರ್.ಆರ್ ನಗರ ಶಾಸಕ ಮುನಿರತ್ನ ಅವರನ್ನ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಭೇಟಿಯಾಗಿ ಮೊಟ್ಟೆ ಎಸೆತ ಪ್ರಕರಣ ಕುರಿತು ಚರ್ಚಿಸಿದರು.

ಬೆಂಗಳೂರಿನ ಶಾಸಕ ಮುನಿರತ್ನ ಅವರ ನಿವಾಸಕ್ಕೆ ಭೇಟಿ ನೀಡಿದ ಸಿ.ಟಿ ರವಿ ಕೆಲಕಾಲ ಅವರೊಂದಿಗೆ ಚರ್ಚಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ,  ಗಾಂಧಿ ರಾಜ್ಯ ಕಟ್ಟುತ್ತೇವೆ ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ ಗೂಂಡಾ ರಾಜ್ಯ ಮಾಡುತ್ತಿದ್ದಾರೆ.  ಅದಕ್ಕೆ ತಾಜಾ ಉದಾಹರಣೆ ನನ್ನ ಮೇಲೆ ಹಲ್ಲೆ ಮತ್ತು  ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವುದು. ಗಾಂಧಿಗಿರಿ ನೆನೆಸುಕೊಳ್ಳೊವಾಗ ಕರ್ನಾಟಕದಲ್ಲಿ ಗೂಂಡಾಗಿರಿ ನಡೆಯುತ್ತಿದೆ ಎಂದು ಕಿಡಿಕಾರಿದರು.

ಮುನಿರತ್ನ ಅವರು ನಮ್ಮ ಪಕ್ಷದ ಶಾಸಕರು, ಪ್ರಜಾಪ್ರಭುತ್ವದಲ್ಲಿ ಆಯ್ಕೆ ಯಾಗಿ ಮಂತ್ರಿಯಾಗಿದ್ದಂತವರು. ಅವರ ಮೇಲಿನ ಹಲ್ಲೆ ನಡೆದಿರುವುದು ದುರಾದೃಷ್ಟಕರ. ನನ್ನ ಕೇಸ್‌ ನಲ್ಲಿ ಈಗ ಕೇಸ್ ಮಾಡಿದ್ದೇ ತಪ್ಪು ಎನ್ನುತ್ತಾರೆ. ಹಾಗಾದ್ರೆ ನನ್ನ ಬಂಧಿಸಿದ್ದುಯಾಕೆ? ಪರಮಾಧಿಕಾರ ಇರೋದು ಸಭಾಪತಿಗಳಿಗೆ, ಸಭಾಪತಿ ರೂಲಿಂಗ್ ಕೊಟ್ಟ ಮೇಲೆಯೂ ಕೇಸ್ ಮಾಡಿದರು ಎಂದು ಸಿಟಿ ರವಿ ಗುಡುಗಿದರು.

Key words: MLC,  C.T. Ravi, met, MLA, Munirathna