ಒಂದು ಕಡೆ ಕೊಟ್ಟು 10 ಕಡೆ ಕಿತ್ತುಕೊಳ್ಳುತ್ತಿದ್ದಾರೆ: ವಿದ್ಯುತ್ ದರ ಏರಿಕೆಗೆ ಸಿ.ಟಿ ರವಿ ಆಕ್ರೋಶ

ಬೆಂಗಳೂರು,ಮಾರ್ಚ್,20,2025 (www.justkannada.in): ಪ್ರತಿ ಯೂನಿಟ್ ಗೆ ವಿದ್ಯುತ್ ದರವನ್ನ 36 ಪೈಸೆ ಹೆಚ್ಚಳ ಮಾಡಿರುವುದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ  ಎಂಎಲ್ ಸಿ ಸಿ.ಟಿ ರವಿ, ಕಾಂಗ್ರೆಸ್ ಸರ್ಕಾರ ಒಂದು ಕಡೆ ಕೊಟ್ಟು 10 ಕಡೆ ಕಿತ್ತುಕೊಳ್ಳುತ್ತಿದ್ದಾರೆ. ಉಸಿರಾಡುವ ಗಾಳಿಗೆ ಟ್ಯಾಕ್ಸ್ ಹಾಕೋದು ಒಂದು ಬಾಕಿ ಇದೆ.   ಬೆಣ್ಣೆ ತರ  ಮಾತನಾಡೋದು ಬೆಲೆ ಏರಿಕೆ ಮಾಡೋದು ಎಂದು ಕುಟುಕಿದರು.

ಹಿಮಾಚಲ ಪ್ರದೇಶದಲ್ಲಿ ಟಾಯ್ಲೆಟ್  ಗೂ  ಟ್ಯಾಕ್ಸ್ ವಿಧಿಸಿದ್ದಾರೆ. ರಾಜ್ಯದಲ್ಲೂ ಅಂತಹ ಪರಿಸ್ಥಿತಿ ಬರಲಿದೆ ಎಂದು ಸಿಟಿ ರವಿ ಕಿಡಿಕಾರಿದರು.

Key words: MLC, CT Ravi, outraged , electricity, price, hike