ಬೆಂಗಳೂರು,ಡಿಸೆಂಬರ್,21,2024 (www.justkannada.in): ಆಕ್ಷೇಪಾರ್ಹ ಪದ ಬಳಕೆಗೆ ಸಂಬಂಧಿಸಿದಂತೆ ಪೊಲೀಸರು ತಮ್ಮ ಬಂಧಿಸಿ ಕರೆದೊಯ್ದಾಗ ತಮ್ಮನ್ನ ನಡೆಸಿಕೊಂಡ ರೀತಿಯ ಬಗ್ಗೆ ಎಂಎಲ್ ಸಿ ಸಿ.ಟಿ ರವಿ ಇಂದು ವಿವರಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ ರವಿ, ಅಂದು ರಾತ್ರಿ ನನ್ನನ್ನ ಪೊಲೀಸರು ಬಂಧಿಸಿದರು. ನಿಮಗೇನು ತೊಂದರೆ ಆಗಲ್ಲ ಎಂದು ಕರೆದೊಯ್ದರು. ಎಲ್ಲಿಗೆ ಕರೆದೊಯ್ಯುತ್ತೀದ್ದೀರಿ ಎಂದೆ. ಬೆಳಗಾವಿಗೆ ಅಂದ್ರು. ಆದರೆ ಧಾರವಾಡಕ್ಕೆ ಕರೆದೊಯ್ದರು. ಎಲ್ಲಾ ಕಡೆ ಸುತ್ತಾಡಿಸಿದರು. ನಮ್ಮ ವಕೀಲರನ್ನೂ ಸಹ ಒಳಗೆ ಬಿಡಲಿಲ್ಲ. ನನಗೆ ಕುಡಿಯಲು ನೀರು ಕೇಳಿದರೂ ಸಹ ಕೊಡಲಿಲ್ಲ ವಾಶ್ ರೂಂಗೆ ತೆರಳಲು ಬಿಡದೆ ತೊಂದರೆ ಕೊಟ್ಟರು . ನಾನು ಯಾವುದೇ ಪ್ರಶ್ನೆ ಕೇಳಿದರೂ ಪೊಲೀಸರು ಉತ್ತರ ನೀಡಲಿಲ್ಲ ಎಂದು ಕಿಡಿಕಾರಿದರು.
ಯಾರೋ ಫೋನ್ ನಲ್ಲಿ ಡೈರೆಕ್ಷನ್ ಕೊಡುತ್ತಿದ್ದರು. ಸವದತ್ತಿ ರಾಮದುರ್ಗ ಹೀಗೆ ಎಲ್ಲಾ ಕಡೆ ಸುತ್ತಾಡಿಸಿದರು . ಮೂತ್ರ ವಿಸರ್ಜನೆಗೂ ಅವಕಾಶ ನೀಡದೆ ಹಿಂಸೆ ಕೊಟ್ಟರು. ಪೊಲೀಸರು ಕರೆದೊಯ್ಯುವಾಗ ತಲೆಗೆ ಪಟ್ಟಾಯಿತು. ಬಲವಂತವಾಗಿ ಫೋನ್ ಕಿತ್ತುಕೊಂಡರು. ಯಾರೋ ಫೋನ್ ಮಾಡಿ ಪೊಲೀಸರಿಗೆ ಯಾಕೆ ಫೋನ್ ಕಿತ್ತುಕೊಂಡಿಲ್ಲ ಎಂದು ತರಾಟೆ ತೆಗೆದುಕೊಳ್ಳುತ್ತಿದ್ದರು ಎಂದು ಸಿ.ಟಿ ರವಿ ತಮಗಾದ ತೊಂದರೆ ಬಗ್ಗೆ ವಿವರಿಸಿದರು.
Key words: MLC, CT Ravi, police, arrest