ಬೆಂಗಳೂರು,ಮೇ,29,2024 (www.justkannada.in): ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಮ್ಮ ಸಲಹೆ ಕೇಳಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಅಭ್ಯರ್ಥಿಗಳ ಆಯ್ಕೆ ಸಂಬಂಧ ಮೊದಲೇ ಹೈಪವರ್ ಕಮಿಟಿ ಮಾಡಿ ಸಲಹೆ ಕೇಳಬೇಕಿತ್ತು. ಈಗ ಕಾಲ ಮೀರಿಹೋಗಿದೆ. 7 ಸ್ಥಾನಗಳಿಗೆ ಸಾಕಷ್ಟು ಅರ್ಜಿಗಳು ಬಂದಿವೆ ಎಂಬುದು ಗೊತ್ತಿಲ್ಲ ಎಂದರು.
ಎಸ್ ಟಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಸಿಐಡಿ ತನಿಖೆ ನಡೆಯುತ್ತಿದೆ. 187 ಕೋಟಿ ವರ್ಗಾವಣೆ ಆಗಿರುವ ಆರೋಪವಿದೆ. ಎಲ್ಲವೂ ಸಿಐಡಿ ತನಿಖೆಯಿಂದ ಹೊರಬರುತ್ತದೆ. ಬಿಜೆಪಿಯವರು ರಾಜೀನಾಮೆ ಕೇಳ್ತಾನೇ ಇರ್ತಾರೆ ತನಿಖೆಗೆ ಸಚಿವರು ಆದೇಶ ಕೊಟ್ಟಿದ್ರಾ..? ಡೆತ್ ನೋಟ್ ನಲ್ಲಿ ಇರೋದು ಆದೇಶ ಅಲ್ಲ. ಪ್ರಕರಣ ಕುರಿತು ಸಿಐಡಿ ತನಿಖೆ ಆಗಲಿ ಸತ್ಯಾಸತ್ಯತೆ ಹೊರಬರಲಿ ಎಂದು ಪರಮೇಶ್ವರ್ ತಿಳಿಸಿದರು.
Key words: MLC, Election, candidates, Minister, Parameshwar