ಕೆಎಸ್ ಒಯು ಅಡಳಿತ ಮಂಡಳಿ ಸದಸ್ಯರಾಗಿ ಎಂಎಲ್ ಸಿ ಹೆಚ್.ವಿಶ್ವನಾಥ್ ಅಧಿಕಾರ ಸ್ವೀಕಾರ.

ಮೈಸೂರು,ಜನವರಿ,14,2022(www.justkannada.in):  ಕರ್ನಾಟಕ ಮುಕ್ತವಿವಿಯ ಅಡಳಿತ ಮಂಡಳಿ ಸದಸ್ಯರಾಗಿ  ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಧಿಕಾರ ಸ್ವೀಕರಿಸಿದರು.

ಕರ್ನಾಟಕ ಮುಕ್ತವಿವಿಯ ನಾಮನಿರ್ದೇಶಿತ ಸದಸ್ಯರಾಗಿ ಹೆಚ್. ವಿಶ್ವನಾಥ್ ನೇಮಕವಾಗಿದ್ದು, ಕೆಎಸ್ಓಯು ಕುಲಪತಿಗಳ ಆಡಳಿತ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ರಿಜಿಸ್ಟಾರ್ ರಾಜಣ್ಣ ಅವರ ಸಮ್ಮುಖದಲ್ಲಿ ಹೆಚ್.ವಿಶ್ವನಾಥ್ ಅಧಿಕಾರ ಸ್ವೀಕಾರ ಮಾಡಿದರು.

ಬಳಿಕ ಮಾತನಾಡಿದ ಅವರು, ಕರ್ನಾಟಕ ಮುಕ್ತ ವಿವಿ ರಾಜ್ಯದ ಏಕೈಕ ಪ್ರತಿಷ್ಠಿತ ‌ವಿಶ್ವವಿದ್ಯಾಲಯ. ಮೈಸೂರು ವಿವಿ ಮಾಜಿ ಕುಲಪತಿ ರಂಗಪ್ಪ ಕಾಲದಲ್ಲಿ ಅತ್ಯುತ್ತಮವಾಗಿ ಮುಕ್ತವಿವಿ ಕಟ್ಟಡ ನಿರ್ಮಾಣ ಆಗಿದೆ. ಸಾವಿರಾರು ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಜವಾಬ್ದಾರಿ ಕೆಎಸ್ಓಯು ಮೇಲಿದೆ. ಗ್ರಾಮಾಂತರ ಭಾಗದ ಮಕ್ಕಳಿಗೆ ಕೆಎಸ್ಓಯು ಸಹಕಾರಿಯಾಗಲಿದೆ. ಇದನ್ನ ಮತ್ತಷ್ಟು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇವೆ. ಮುಕ್ತ ವಿವಿಯ ಕುಲಪತಿಗಳಿಗೆ ಕೋರೊನಾ ಪಾಸಿಟಿವ್ ಆಗಿದೆ. ಹಾಗಾಗಿ ರಿಜಿಸ್ಟರ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ. ಅಧಿಕಾರ ಸ್ವೀಕರಿಸಿದ ಬಳಿಕ  ಆಡಳಿತ ಮಂಡಳಿ ಜೊತೆ ಕುಳಿತು ಚರ್ಚೆ ಮಾಡುತ್ತೇನೆ ಎಂದರು.

1 ರಿಂದ 7ನೇ ತರಗತಿ ವರೆಗೆ ಸಂಪೂರ್ಣವಾಗಿ ಶಾಲೆ ಬಂದ್ ಮಾಡಿ.

1 ರಿಂದ 7ನೇ ತರಗತಿ ವರೆಗೆ ಸಂಪೂರ್ಣವಾಗಿ ಶಾಲೆ ಬಂದ್ ಮಾಡಿ ಎಂದು ಸಲಹೆ ನೀಡಿದ ಹೆಚ್.ವಿಶ್ವನಾಥ್ , 3ನೇ ಅಲೆ ಮಕ್ಕಳಿಗೆ ವ್ಯಾಪಕವಾಗಿ ಹರಡುತ್ತಿದೆ. 18ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಹಾಕಿದ್ದೇವೆ. ಮಕ್ಕಳಿಗೆ ಇದುವರೆಗೆ ಯಾವುದೇ ಲಸಿಕೆ ಕೊಟ್ಟಿಲ್ಲ. ಆದ್ದರಿಂದ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಶಾಲೆಗಳನ್ನು ಬಂದ್ ಮಾಡುವುದು ಸೂಕ್ತ. ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ನಡೆಸುವುದು ಅನಿವಾರ್ಯ. ಆರೋಗ್ಯ ತಜ್ಞರ ಜೊತೆಗೆ ಚರ್ಚೆ ಮಾಡಿ ಶೈಕ್ಷಣಿಕ ತೀರ್ಮಾನ ತೆಗೆದುಕೊಳ್ಳಬೇಡಿ. ಶಿಕ್ಷಣ ತಜ್ಞರ ಅಭಿಪ್ರಾಯ ತೆಗೆದುಕೊಳ್ಳಿ. ಏನು ಮಾಡಬೇಕು, ಏನು‌ ಮಾಡಬಾರದು ಅಂತ ಶಿಕ್ಷಣ ತಜ್ಞರ ಸಲಹೆ ಪಡೆದುಕೊಳ್ಳಿ ಎಂದು ಹೇಳಿದರು.

ಮೇಕೆದಾಟು ಯೋಜನೆಗೆ ಪಾದಯಾತ್ರೆ ಸಮರ ಬೇಕಿಲ್ಲ.

ಇದೇ ವೇಳೆ ಕಾಂಗ್ರೆಸ್ ಪಾದಯಾತ್ರೆ ಕುರಿತು ಟೀಕಿಸಿದ ಹೆಚ್.ವಿಶ್ವನಾಥ್, ಮೇಕೆದಾಟು ಯೋಜನೆಗೆ ಪಾದಯಾತ್ರೆ ಸಮರ ಬೇಕಿಲ್ಲ. ಇದಕ್ಕೆ ಕಾನೂನು ಸಮರ ಆಗಬೇಕು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪಾದಯಾತ್ರೆ ಮಾಡಿದ್ದಾರೆ. ಇದರಿಂದ ಏನು ಪ್ರಯೋಜನ ಆಯ್ತು.?ಬಳ್ಳಾರಿ ರೆಡ್ಡಿಗಳಿಗೆ ಸಿದ್ದರಾಮಯ್ಯ ಪಾದಯಾತ್ರೆಯಿಂದ ಶಿಕ್ಷೆ ಆಗಲಿಲ್ಲ. ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ಕಾನೂನಿನ ಮೂಲಕ ಶಿಕ್ಷೆ ಆಯ್ತು. 720ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂತು. ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ  ಅವರ ವಿರುದ್ಧ ಯಾವ ಕ್ರಮ ಕೈಗೊಂಡರು ಎಂದು ಕುಟುಕಿದರು.

ಮೇಕೆದಾಟು ಯೋಜನೆ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಕಾನೂನು ಹೋರಾಟದ ಮೂಲಕವೇ ಈ ವಿಚಾರ ಬಗೆಹರಿಯಬೇಕು. ಸಿದ್ದರಾಮಯ್ಯ ಕಾನೂನು ಪಂಡಿತರು, ಇದೆಲ್ಲವೂ ಅವರಿಗೆ ಮೊದಲೇ ಗೊತ್ತಿತ್ತು. ಹೀಗಿದ್ದೂ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡಿದ್ರು ಅಷ್ಟೇ ಎಂದು ಹೆಚ್.ವಿಶ್ವನಾಥ್ ಹೇಳಿದರು.

Key words: MLC -H. Vishwanath – member – KSOU – Board of Governance

ENGLISH SUMMARY….

MLC H. Vishwanath takes charge as KSOU Administrative Board member
Mysuru, January 14, 2022 (www.justkannada.in): Member of Legislative Council H. Vishwanath today took charge as a member of the Karnataka State Open University Administrative Board.
H. Vishwanath has been appointed as a nominated member of the KSOU. He took over the charge at a program held at the KSOU Vice-Chancellor’s administrative office in the presence of Registrar Rajanna.
Speaking on the occasion, he informed that the KSOU is the only reputed Open University in the State. “A wonderful building was built when Prof. K.S. Rangappa was the Vice-Chancellor of the University of Mysore. KSOU shoulders the responsibility of making the dreams of thousands of students come true. KSOU is particularly very helpful for rural students. We should work towards further developing the University in this aspect. The KSOU VC has tested Corona positive. That is why I am taking charge in the presence of the Registrar. I will talk to the administrative board after taking charge,” he informed.
Keywords: MLC/ H. Vishwanath/ KSOU/ Board member/ takes charge