ಮೈಸೂರು ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಆಯ್ಕೆ ಸ್ವಾಗತಿಸಿದ ಎಂಎಲ್ ಸಿ ಹೆಚ್.ವಿಶ್ವನಾಥ್.

ಮೈಸೂರು,ಅಕ್ಟೋಬರ್,6,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರನ್ನ ಆಯ್ಕೆ ಮಾಡಿರುವ ನಿರ್ಧಾರವನ್ನ  ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸ್ವಾಗತಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಈ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್,  ದಸರಾಗೆ ಎಸ್‌ಎಂ ಕೃಷ್ಣರ ಆಯ್ಕೆ ಸ್ವಾಗತಾರ್ಹ. ಇವರ ಆಯ್ಕೆ ರಾಜಕೀಯ, ರಾಜಕಾರಣದ ಅಸ್ಪೃಶ್ಯತೆ ನಿವಾರಣೆಯಾಗಿದೆ. ಇದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಸಾಂಸ್ಕೃತಿಕ ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿ ಎಸ್‌.ಎಂ. ಕೃಷ್ಣ. ಬಸವರಾಜ ಬೊಮ್ಮಾಯಿ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ರಾಜಕಾರಣದ ಬಗ್ಗೆ ಇದ್ದ ತಾತ್ಸರದ ಮನೋಭಾವ ದೂರ ಮಾಡುವ ನಿಟ್ಟಿನಲ್ಲಿ ಇದೊಂದು ಸೂಕ್ತ ತೀರ್ಮಾನ.  ಇದುವರೆಗೂ ಸಾಹಿತಿ, ವಿಜ್ಞಾನಿಗಳು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಉದ್ಘಾಟಿಸಿದ್ದರು. ರಾಜಕೀಯ ಕ್ಷೇತ್ರದ ಎಸ್‌.ಎಂ. ಕೃಷ್ಣ  ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ಎಸ್‌‌.ಎಂ‌.ಕೃಷ್ಣ ಅವರು ಹಿರಿಯ ರಾಜಕಾರಣಿಗಳು, ಜನಾದೇಶ ಪಾಲಿಸಿ ಆಡಳಿತ ನಡೆಸಿದವರು ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಎಸ್ ಎಂ ಕೃಷ್ಷರವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸತತ ಮೂರು ವರ್ಷ ಬರಗಾಲ ಎದುರಾಯಿತು. ಡಾ ರಾಜಕುಮಾರ್ ರನ್ನು ವೀರಪ್ಪನ್ ಅಪಹರಿಸಿದ. ಮಾಜಿ ಸಚಿವ ನಾಗಪ್ಪನವರ ಹತ್ಯೆಯಾಯಿತು. ಇಂತಹ ಹಲವು ಸಮಸ್ಯೆಗಳ ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಸ್ ಎಂ ಕೃಷ್ಣ ಶ್ರಮಿಸಿದ್ದಾರೆ. ಅವರ ಕಾಲದಲ್ಲಿ ಐಟಿಬಿಟಿ ಕ್ಷೇತ್ರದಲ್ಲಿ ಬಹುದೊಡ್ಡ ಬೆಳವಣಿಗೆ ಆಯಿತು. ಅವರ ಆಡಳಿತಾವಧಿಯಲ್ಲಿ ಬೆಂಗಳೂರು ಜಾಗತೀಕವಾಗಿ ಗುರ್ತಿಸಿಕೊಳ್ಳುವಂತಾಯಿತು. ಶಿಸ್ತು ಸಂಯಮಕ್ಕೆ ಹೆಸರಾಗಿರುವ ಎಸ್.ಎಂ ಕೃಷ್ಣರವರು ಈ ಬಾರಿಯ ದಸರಾ ಉದ್ಘಾಟಿಸುತ್ತಿರುವುದು ದಸರಾಕ್ಕಿರುವ ಮಹತ್ವದಷ್ಟೇ ಕೃಷ್ಣರವರ ಮಹತ್ವವನ್ನು ಸಾರುತ್ತಿದೆ. ಈಗಿನ ನೂತನ ಶಿಕ್ಷಣ‌ ನೀತಿ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗಲೇ ಪ್ರಜಾಪ್ರಭುತ್ವೀಕರಣ ಮಾಡಿದ್ದರು ಎಂದು ಹೆಚ್.ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

Key words: MLC –H.Vishwanath – selection -former CM- SM Krishna – inauguration – Mysore Dasara.

ENGLISH SUMMARY…

MLC H. Vishwanath welcomes selection of former CM S.M. Krishna to inaugurate Mysuru Dasara mahotsav
Mysuru, October 6, 2021 (www.justkannada.in): Member of the Legislative Council H. Vishwanath has welcomed the State Government’s decision on selecting former Chief Minister and veteran politician S.M. Krishna to inaugurate the world-famous Mysuru Dasara Mahotsav.
Addressing a press meet in Mysuru today, H. Vishwanath informed that by selecting S.M. Krishna to inaugurate the Dasara celebration, political untouchability has been eradicated. “It is a very happy, and proud moment. I would like to thank Chief Minister Basavaraj Bommai and District In-charge Minister S.T. Somashekar,” he said.
“Basavaraj Bommai has set an example and has paved way for a new culture by selecting veteran S.M. Krishna for the inauguration. This is appropriate to wipe out the existing political negligence. Only litterateurs, scientists, and dignitaries from other sectors used to inaugurate the Mysuru Dasara celebrations. It is very happy to note that S.M. Krishna, who is from a political background will inaugurate the program this year,” H.Vishwanath added.
Keywords: MLC H. Vishwanath/ former CM S.M. Krishna/ Mysuru Dasara/ inauguration