ಮೈಸೂರು,ಡಿಸೆಂಬರ್,14,2020(www.justkannada.in): ಇತ್ತೀಚೆಗಷ್ಟೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಧಾನಪರಿಷತ್ ಸದಸ್ಯ ರಘು ಆಚಾರ್ ಇದೀಗ ಸಂಸದ ಪ್ರತಾಪ್ ಸಿಂಹ ವಿರುದ್ದವೂ ಗುಡುಗಿದ್ದಾರೆ.
ಮೋದಿ ಅಲೆಯಿಂದ ನೀವು ಗೆದ್ದಿರುವುದು ಸ್ವತಂತ್ರವಾಗಿ ನಿಂತು ಕಾರ್ಪೋರೇಟರ್ ಆಗಿ ಸಾಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಎಂಎಲ್ ಸಿ ರಘು ಆಚಾರ್ ಬಹಿರಂಗ ಸವಾಲು ಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ರಘು ಆಚಾರ್ ವಾಗ್ದಾಳಿ ನಡೆಸಿದ್ದರು. ನಂತರ ಸಂಸದ ಪ್ರತಾಪ್ ಸಿಂಹ ಅವರು ಡಿಸಿ ರೋಹಿಣಿ ಸಿಂಧೂರಿ ಪರವಾಗಿ ಬ್ಯಾಟ್ ಬೀಸಿ ಮೊದಲು ಲೆಜಿಸ್ಲೇಟಿವ್ ಕುರಿತು ಓದುವಂತೆ ಎಂಎಲ್ಸಿ ರಘು ಆಚಾರ್ ಗೆ ಟಾಂಗ್ ನೀಡಿದ್ದರು.
ಈ ಸಂಬಂಧ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಂಸದ ಪ್ರತಾಪ್ಸಿಂಹ ಆರೋಪಕ್ಕೆ ತಿರುಗೇಟು ನೀಡಿದ ರಘು ಆಚಾರ್ , ನಾನು ಲೆಜಿಸ್ಲೇಟಿವ್ ಕುರಿತು ಓದಿದ್ದೇನೆ. ನೀವು ಏನು ಓದಿದ್ದೀರಾ..? ಪಾರ್ಲಿಮೆಂಟ್ ಬಗ್ಗೆ ಏನು ತಿಳಿದುಕೊಂಡಿದ್ದೀರಿ..? ಬೆತ್ತಲೆ ಜಗತ್ತು ಓದಿದ್ದೇನೆ ಅದನ್ನು ಓದಿದ ಮೇಲೆ ಆ ಪುಸ್ತಕವನ್ನು ಬರೆದವರು ನೀವಲ್ಲ ಅನ್ನಿಸಿತು. ಯಾರೋ ಬರೆದ ಪುಸ್ತಕಕ್ಕೆ ಇನ್ಯಾರೋ ಸಹಿ ಮಾಡುತ್ತಾರೆ ಎಂದು ಕಿಡಿಕಾರಿದರು.
ಬುದ್ಧಿಯಿಲ್ಲದಿರುವ ಸಂಸದರನ್ನು ಗೆಲ್ಲಿಸಿರುವುದು ವಿಪರ್ಯಾಸ. ಎಂಪಿ ಆದವರು ಕೇವಲ ಬೆಂಗಳೂರು ಮೈಸೂರು ಹೆದ್ದಾರಿ ಮಾಡುವುದು ಒಂದೇನಾ..? ಎಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೀರಾ. ಸಂಸದರಾಗಿ ಈ ಭಾಗಕ್ಕೆ ನಿಮ್ಮ ಸಾಧನೆಗಳೇನು..? ಇನ್ನೊಬ್ಬರ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೀರಾ..? ಮೋದಿ ಅಲೆಯಿಂದ ನೀವು ಗೆದ್ದಿರುವುದು. ಸ್ವತಂತ್ರವಾಗಿ ನಿಂತು ಕಾರ್ಪೋರೇಟರ್ ಆಗಿ ಸಾಕು ಎಂದು ಸಂಸದ ಪ್ರತಾಪ್ಸಿಂಹಗೆ ರಘು ಆಚಾರ್ ಬಹಿರಂಗ ಸವಾಲು ಹಾಕಿದರು.
Key words: MLC -Raghu Achar- challenges –Pratap simha- mysore-MP