ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರದಲ್ಲೇ ಮರಳು ಮಾಫಿಯಾ- MLC ರವಿಕುಮಾರ್ ಆರೋಪ

ಕಲಬುರಗಿ,ಏಪ್ರಿಲ್,18,2025 (www.justkannada.in) ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರದಲ್ಲೇ ಮರಳು ಮಾಫಿಯಾ ನಡೆಯುತ್ತಿದೆ. ಚಿತ್ತಾಪುರದಲ್ಲಿ ದೊಡ್ಡ ಮಟ್ಟದ ಮರಳು ಮಾಫಿಯಾ ನಡೆಯುತ್ತಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ರವಿಕುಮಾರ್, ಸಚಿವ ಪ್ರಿಯಾಂಕ್  ಖರ್ಗೆ ಚಿತ್ತಾಪುರದಲ್ಲಿ ದೊಡ್ಡ ಮಟ್ಟದ ಮರಳು ಮಾಫಿಯಾ ನಡೆಯುತ್ತಿದೆ.  ಅಲ್ಲಿ ಸರ್ಕಾರಿ ಸಂಸ್ಥೆಗೆ ಮರಳುಗಾರಿಕೆಗೆ ಅನುಮತಿ ನೀಡಿತ್ತು. ಅದರೆ  ಅಲ್ಲಿ ಅಕ್ರಮ ಮರಳುಗಾರಿಕೆ  ನಡೆಯುತ್ತಿದೆ  ಅಕ್ರಮ ಮರಳುಗಾರಿಕೆ ವಿರುದ್ದ ಹೋರಾಟ ಮಾಡುತ್ತೇವೆ ಎಂದರು.

ಕಾಂಗ್ರೆನವರು ಧಿಕ್ಕಾರ ಕೂಗಿದ್ರೆ ನಾವೇನು ಓಡಿ ಹೋಗಲ್ಲ. ನಮ್ಮ ಹೋರಾಟ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ.  ಸಚಿವ ವಿತಂಡವಾದ ಮಾಡದೆ ಈ ಭಾಗದ ಸಂಪತ್ತು ಉಳಿಸುವ ಕೆಲಸ ಮಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ರವಿಕುಮಾರ್ ಆಗ್ರಹಿಸಿದರು.

Key words:  Minister, Priyank Kharge, constituency, sand mafia,  MLC, Ravikumar