ಎಂಎಲ್ಸಿ  ವಿಶ್ವನಾಥ್ ಗೆ ತಲೆ ಕೆಟ್ಟಿದೆ, ಹುಚ್ಚುಹುಚ್ಚಾಗಿ ಮಾತಾಡುವುದನ್ನು ನಿಲ್ಲಿಸಿ: ಎಂ.ಲಕ್ಷ್ಮಣ್‌

MLC Vishwanath stop talking nonsense, congress spokesperson M Lakshmanan warns.

 

MLC Vishwanath stop talking nonsense, congress spokesperson M Lakshmanan warns.

ಮೈಸೂರು. ಜು.02,2024: (www.justkannada.in news) ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಅವರಿಗೆ ತಲೆ ಕೆಟ್ಟಿದೆ ಅನ್ಸುತ್ತೆ. ಹುಚ್ಚು ಹುಚ್ಚು ರೀತಿ ಮಾತನಾಡುವುದನ್ನ ನಿಲ್ಲಿಸಿ. ನೀವು ಮಾಡುವ ಆರೋಪಗಳಿಗೆ ದಾಖಲೆ ಇಟ್ಟು ಮಾತನಾಡಿ .

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮ ಕುರಿತು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು..

ಅಕ್ರಮ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶ್ರೀಮತಿ ಹೆಸರು ಕೇಳಿ ಬರುತ್ತಿದೆ. ಬಿಜೆಪಿ-  ಜೆಡಿಎಸ್ ನವರು ದಾಖಲೆಗಳಿಲ್ಲದೆ ಹಿಟ್ ಅಂಡ್ ರನ್ ಕೇಸ್ ಮಾಡುವುದು ಸರಿಯಲ್ಲ. ಮಾತನಾಡುವ ಹಕ್ಕಿದೆ, ಆದರೆ ಸುಳ್ಳು ಆರೋಪ ಮಾಡುವುದಕ್ಕೆ ಹಕ್ಕಿಲ್ಲ. ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್  ಮುಖ್ಯಮಂತ್ರಿಗಳ ಹೆಂಡತಿ ಪಾರ್ವತಿ ಅವರ ಮೇಲೆ ಆಪಾದನೆ ಮಾಡಿದ್ದಾರೆ. ದಾಖಲೆಗಳನ್ನು ನಾವು ನಿಮಗೆ ಕಳಿಸಿಕೊಡುತ್ತೇವೆ ,ಅದನ್ನ ನೋಡಿ ಮಾತನಾಡಿ. ಸುಖ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿರುವ ಅಕ್ರಮ ಇದು. ಇವರ ಮೇಲೆ ಶಿಸ್ತು ಕ್ರಮ ಜರುಗಿಸಲು ನಮ್ಮ  ಸರ್ಕಾರ ಈಗ ಉನ್ನತಮಟ್ಟದ ತನಿಖಾ ತಂಡ ರಚಿಸಿದೆ ಎಂದು ಲಕ್ಷ್ಮಣ್‌ ಸಮರ್ಥಿಸಿಕೊಂಡರು.

ಸಿಎಂ ಪತ್ನಿ ಪಾತ್ರ ಇದೆಯಾ..?:

ಮುಡಾ ನಿವೇಶನ ಹಂಚಿಕೆ ಗೋಲ್‌ ಮಾಲ್‌ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮಡದಿ ಪಾರ್ವತಿ ಅವರ ಹೆಸರನ್ನು ವಿಪಕ್ಷಗಳು ಎಳೆದು ತರುತ್ತಿವೆ. ಇದು ಸತ್ಯಕ್ಕೆ ದೂರವಾದದ್ದು ಎಂದ ಲಕ್ಷ್ಮಣ್‌, ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ಎಳೆಎಳೆಯಾಗಿ ನೀಡಿದ್ದು ಹೀಗೆ..

ಮೈಸೂರಿನ ಕೆಸರೆಯ ಸರ್ವೇ ನಂಬರ್ 464 ರಲ್ಲಿ 3.14 ಎಕರೆ ಮಲ್ಲಿಕಾರ್ಜುನ ಸ್ವಾಮಿ ಎನ್ನುವ ವ್ಯಕ್ತಿಗೆ ಸೇರಿದ್ದ ಜಮೀನಿತ್ತು. ಮಲ್ಲಿಕಾರ್ಜುನ ಸ್ವಾಮಿ ಸಿಎಂ ಸಿದ್ದರಾಮಯ್ಯ ಅವರ ಹೆಂಡತಿ ಪಾರ್ವತಮ್ಮ ಅವರ ಸಹೋದರ.

3.14 ಗುಂಟೆ ಜಮೀನನನ್ನು 1997 ರಲ್ಲಿ ಮುಡಾ ದೇವನೂರು ಮೂರನೇ ಹಂತದ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಿದೆ. ತದ ನಂತರ ಅದನ್ನ ಕೈಬಿಟ್ಟು ಎಂದು ಆದೇಶ ಮಾಡಿದೆ.

ಡೀನೋಟಿಫೈ ಆದಮೇಲೆ ಮಲ್ಲಿಕಾರ್ಜುನ ಸ್ವಾಮಿ ಅವರ ಹೆಸರಿಗೆ 2005 ರಲ್ಲಿ  ರಿಜಿಸ್ಟರ್ ಆಗಿದೆ. ಇದಾದ ಮೇಲೆ ಅವರ ತಂಗಿ ಪಾರ್ವತಮ್ಮ ಅವರಿಗೆ 2020 ರಲ್ಲಿ ದಾನಪತ್ರ ಮಾಡಿದ್ದಾರೆ.

ಇದಾದ ಮೇಲೆ ಏಕಾಏಕಿ ಮುಡಾದವರು ಮೂರನೇ ಹಂತದ ಬಡವಣೆ ನಿರ್ಮಾಣ ಮಾಡಲಿಕ್ಕೆ ಹೊರಟು ಸೈಟು ಹಂಚಿಕೆ ಮಾಡಿದ್ದಾರೆ. ಮುಡಾದವರು ಸ್ವಯಂ ಪ್ರೇರಿತವಾಗಿ ಇವರೇ ಡೀನೋಟಿಫೈ ಮಾಡಿ ಮತ್ತೆ ಅಕ್ವೈರ್ ಮಾಡಿಕೊಂಡು ಬಡಾವಣೆ ಮಾಡಿದ್ದಾರೆ.

ಇದರ ಬಗ್ಗೆ ಆಕ್ಷೇಪವೆತ್ತಿ ಮುಡಾಗೆ ಪಾರ್ವತಮ್ಮ ಅವರು ಪತ್ರ ಬರೆದಿದ್ದಾರೆ. ಪಾರ್ವತಮ್ಮ ಅವರ ಜಮೀನು 148104 ಚದರ ಅಡಿ ಇದೆ 50:50 ,ಅನುಪಾತದಡಿ ಇವರಿಗೆ 82 ಸಾವಿರ ಚದರ ಅಡಿ ಜಾಗ ಇವರಿಗೆ ಕೊಡಬೇಕಿತ್ತು. ಆದರೆ, 38,284  ಸಾವಿರ ಚದರ ಅಡಿ ಜಾಗವನ್ನಮಾತ್ರ  ವಿಜಯನಗರದಲ್ಲಿ ಕೊಟ್ಟಿದ್ದಾರೆ.

ಆಗ ಯಾವ ಸರ್ಕಾರ ಇತ್ತು..? ಸರ್ಕಾರವೇ ಭೂಮಿ ಕಳೆದುಕೊಂಡ ಪಾರ್ವತಮ್ಮ ಅವರಿಗೆ ಬೇರೆಡೆ 50:50 ಅನುಪಾತದಡಿ  ಜಾಗ ಕೊಟ್ಟಿದ್ದಾರೆ. ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ.

ಶಾಸಕ ಶ್ರೀವತ್ಸ, ಎಂಎಲ್ಸಿ ವಿಶ್ವನಾಥ್ ಮತ್ತಿತರರು ಸುಖಸುಮ್ಮನೆ ಸಿಎಂ ಮಡದೆ ಹೆಸರು ತರುವುದು ಸರಿಯಲ್ಲ ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದರು.

ವಿಶ್ವನಾಥ್ ಅವರಿಗೆ ತಲೆ ಕೆಟ್ಟಿದೆ ಅನ್ಸುತ್ತೆ. ಹುಚ್ಚು ಹುಚ್ಚು ರೀತಿ ಮಾತನಾಡುವುದನ್ನ ನಿಲ್ಲಿಸಿ ದಾಖಲೆ ಇಟ್ಟು ಮಾತನಾಡಿ  ಇವರೇ ಕಾನೂನು ಬದಲಾಯಿಸಿಕೊಂಡು ವಿಜಯನಗರದಲ್ಲಿ 14 ಸೈಟುಗಳನ್ನ ಅವರಿಗೆ ಕೊಟ್ಟಿದ್ದಾರೆ. ಇದು ಅಲ್ಲಿ ಭೂಮಿ ಕಳೆದುಕೊಂಡ ಪಾರ್ವತಮ್ಮ ಅವರಿಗೆ ಇಲ್ಲಿ ಕೊಟ್ಟಿದ್ದಾರೆ.

ಮುಡಾದವರು ಏನು ಬಿಟ್ಟಿಯಾಗಿ ಕೊಟ್ಟಿಲ್ಲ. ಆದರೆ,ಬಿಜೆಪಿಯವರು ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ದಾಖಲೆ ಇಟ್ಟುಕೊಂಡು ಮಾತನಾಡಬೇಕು.

ಇಲ್ಲಿ 50:50 ಅನುಪಾತದಡಿ ಜಮೀನು ಕಳೆದುಕೊಂಡ ಸಿಎಂ ಮಡದಿ ಪಾರ್ವತಮ್ಮ ಅವರಿಗೆ ಅಲ್ಲಿ ಕೊಡುವ ಬದಲು ಇಲ್ಲಿ ಕೊಟ್ಟಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿಕೆ.

key words: MLC Vishwanath, stop talking nonsense, congress spokesperson, M Lakshmanan, warns.