ಜಮೀನಿನ ಬೆಳೆಗೆ “ ವಕ್ರದೃಷ್ಠಿ”  ಬೀಳದಂತೆ ರೈತನ “ ಮಾಡೆಲ್‌ “ ಪ್ಲಾನ್..!

The farmer's "model" plan is to ensure that the crop of the farm does not get "crooked".

ಮೈಸೂರು, ಫೆ.೨೦, ೨೦೨೫:  ಫಲವತ್ತಾದ ಕೃಷಿ ಭೂಮಿಯಲ್ಲಿ ಸೊಗಸಾಗಿ ಬೆಳೆದ ಬೆಳೆಗೆ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಭೂತದ ಮುಖವಾಡ ಇರುವ ಬೆಚ್ಚಿದ ಬೊಂಬೆಗಳನ್ನು  ಅಳವಡಿಸುವುದನ್ನ ನೋಡಿದ್ದೇವೆ. ಆದ್ರೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಚುಂಚನಹಳ್ಳಿಯ ಬಳಿ ಇರುವ  ಕಕ್ಕನ ಹಟ್ಟಿ ಗ್ರಾಮದ  ರೈತ ಐನಾತಿ ಐಡಿಯಾ ಹುಡುಕಿದ್ದಾನೆ. ಅರೆಬೆತ್ತಲೆಯಾಗಿ ಇರುವ ಮಾಡೆಲ್ ಗಳ ಫೋಟೋಗಳನ್ನ ತನ್ನ ಜಮೀನಿನ ಸುತ್ತ ಅಳವಡಿಸಿ ಗ್ರಾಮಸ್ಥರು ಮತ್ತು ದಿನನಿತ್ಯ ಸಂಚರಿಸುವ ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣನಾಗಿದ್ದಾನೆ.

ನಂಜನಗೂಡು ತಾಲೂಕಿನ ಕಕ್ಕನಹಟ್ಟಿ ಗ್ರಾಮದ ರೈತ ಸೋಮೇಶ್ ಇಂತಹ ಐನಾತಿ ಐಡಿಯಾ ಹುಡುಕಿ ಚರ್ಚೆಗೆ ಗ್ರಾಸವಾಗಿರುವುದು.

ತನ್ನ ನಾಲ್ಕು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸೊಗಸಾಗಿ ಮೂಡಿ ಬಂದಿದೆ.ಬೆಳೆ ಮೇಲೆ ಸಾರ್ವಜನಿಕರು ಮತ್ತು ದಾರಿಹೋಕರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳನ್ನ ಅಳವಡಿಸುವ ಬದಲು ಮಾಡೆಲ್ ಗಳ ಅರೆಬೆತ್ತಲೆ ಫೋಟೋಗಳನ್ನ ಅಳವಡಿಸಿದ್ದು, ಜಮೀನಿನ ಸುತ್ತು ಸುಮಾರು 10 ಸ್ಥಳಗಳಲ್ಲಿ ಮಾಡೆಲ್ ಗಳ ಚಿತ್ರಗಳು ರಾರಾಜಿಸುತ್ತಿವೆ.

ದಾರಿಹೋಕರಂತೂ ಸೊಗಸಾಗಿ ಸಮೃದ್ದಿಯಾಗಿ ಬೆಳೆದ ಬಾಳೆ ಗಿಡಗಳ ಮೇಲೆ ದೃಷ್ಟಿ ಹರಿಸದೆ ಮಾಡೆಲ್ ಗಳನ್ನ ಕಣ್ತುಂಬಿಕೊಂಡು ಸಾಗುತ್ತಿದ್ದಾರಂತೆ. ರೈತ ಸೋಮೇಶ್ ಐನಾತಿ ಐಡಿಯಾ ಕೆಲವು ಗ್ರಾಮಸ್ಥರನ್ನ ಕೆರಳಿಸಿದ್ರೆ ಪಡ್ಡೆ ಹುಡುಗರ ನಿದ್ದೆ ಗೆಡಿಸಿರುವುದಂತೂ ಸುಳ್ಳಲ್ಲ.

key words: The farmer, model photos, crop, “crooked”.

The farmer’s “model” plan is to ensure that the crop of the farm does not get “crooked”.