ಮೈಸೂರು ,ಜನವರಿ,13,2023(www.justkannada.in): ಕೇವಲ ಪ್ರಚಾರಕ್ಕಾಗಿ ಪ್ರಧಾನಿ ಮೋದಿ, ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ. ಯಾರಾದರೂ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ..? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಆರ್.ಧೃವನಾರಾಯಣ್, ಇಡೀ ರಾಜ್ಯಾದ್ಯಂತ ಪ್ರಜಾಧ್ವನಿ ಬಸ್ ಯಾತ್ರೆ ಆರಂಭವಾಗ್ತಿದೆ. ಇದರಲ್ಲಿ ಜನ ವಿರೋಧಿ ಬಿಜೆಪಿ ಬಗ್ಗೆ ಜನರಿಗೆ ತಿಳಿಸುತ್ತೇವೆ. ಈ ಬಿಜೆಪಿಯ್ರು ಬಂದ ಮೇಲೆ ರಾಜ್ಯದ ಅಭಿವೃದ್ಧಿ ಕೆಲಸಗಳೇ ಆಗಿಲ್ಲ. ಬಿಜೆಪಿಗೆ ಸುಳ್ಳೇ ಮನೆದೇವರು. ಪ್ರಚಾರಕ್ಕಾಗಿ ಮೋದಿ, ಅಮಿತ್ ಶಾ ಬರ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಬರುತ್ತಿಲ್ಲ. ರಾಮನಗರದಲ್ಲಿ ರಾಮಮಂದಿರ, ಮಂಡ್ಯದಲ್ಲಿ ಆಂಜನೇಯ ಮಂದಿರ ಅಂತಾರೆ. ಬರೀ ಭಾವನಾತ್ಮಕ ವಿಚಾರಗಳನ್ನ ಕೆಣಕಲು ಬರ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ದೃವನಾರಾಯಣ್, ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ನೇಮಕ ಮಾಡಲಾಗಿದೆ. ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮಾಹಿತಿ ಕಲೆಹಾಕಿದ್ದೇವೆ. ನಾಳೆ ರಣದೀಪ್ ಸಿಂಗ್ ಸುರ್ಜಿವಾಲ, ವೇಣುಗೋಪಾಲ್ ಅವರಿಂದ ಉಸ್ತುವಾರಿಗಳ ಸಭೆ ಇದೆ. ಸಭೆಯಲ್ಲಿ ಸಂಗ್ರಹಿಸಿರುವ ಹೆಸರುಗಳ ವರದಿಯನ್ನ ನೀಡಲಿದ್ದೇವೆ. ಅದು ದೆಹಲಿಯಲ್ಲಿ ಫೈನಲ್ ಆಗಲಿದೆ. ಸದ್ಯದಲ್ಲೇ ಹೆಸರಗಳನ್ನ ಘೋಷಣೆ ಮಾಡಲಾಗುತ್ತೆ ಎಂದರು.
16 ನೇ ತಾರೀಖು ಪ್ರಥಮ ಬಾರಿಗೆ ಮಹಿಳಾ ಸಮಾವೇಶ ಉದ್ಘಾಟನೆಗೆ ಪ್ರಿಯಾಂಕಾ ಗಾಂಧಿ ಬರ್ತಿದ್ದಾರೆ. ಮೈಸೂರಿನಿಂದ 5 ಸಾವಿರ ಜನ ಸೇರ್ತಾರೆ. ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ಸಮಾವೇಶ ನಡೆಯುತ್ತದೆ ಎಂದು ತಿಳಿಸಿದರು.
Key words: Modi -Amit Shah –not -talk –about- development-R. Dhruvanarayan