ಹಾಸನ,ಜೂನ್,17,2023(www.justkannada.in): ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಕೆ.ಎನ್ ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆಗೂ ಮುನ್ನ ಅಕ್ಕಿ ಕೊಡುವುದಾಗಿ ಘೋಷಿಸಿದ ವೇಳೆ ಹೆಚ್ಚುವರಿಯಾಗಿ ಅಕ್ಕಿ ನೀಡುವಂತೆ ಕೇಂದ್ರ ಆಹಾರ ನಿಗಮ(FCI) ಜೊತೆ ಚರ್ಚೆ ಮಾಡಿಲ್ಲ ಎಂಬ ಆರೋಪಕ್ಕೆ ಕಿಡಿಕಾರಿದ ಸಚಿವ ಕೆ.ಎನ್ ರಾಜಣ್ಣ, ಪ್ರಧಾನಿ ಮೋದಿಯವರು ಎಲ್ಲರ ಖಾತೆಗೆ ಹದಿನೈದು ಲಕ್ಷ ಹಣ ಹಾಕ್ತೀನಿ ಅಂತಾ ಹೇಳಿದ್ರಲ್ವಾ? ಅವರು ಅನುಮತಿ ತಗೊಂಡು ಘೋಷಣೆ ಮಾಡಿದ್ರಾ ಎಂದು ಟಾಂಗ್ ನೀಡಿದರು.
ಹಾಸನದಲ್ಲಿ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ ಮಾಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆಎನ್ ರಾಜಣ್ಣ, ಎಫ್ಸಿಐ ಜೊತೆ ಚರ್ಚೆ ಮಾಡಿ ನಾವು ಘೋಷಣೆ ಮಾಡಬೇಕಿಲ್ಲ. ಅವರೇನು ಪುಕ್ಕಟ್ಟೆ ಕೊಡ್ತಾರಾ. ನಾವು ಹಣ ನೀಡಿ ಖರೀದಿ ಮಾಡೋದು ಎಂದರು.
ಹಾಗೆಯೇ ನನಗೆ ಹಾಸನ ಜಿಲ್ಲೆ ಉಸ್ತುವಾರಿ ಯಾಕೆ ಕೊಟ್ಟಿದಾರೊ ಗೊತ್ತಿಲ್ಲ. ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ, ಬಹುಶಃ ಬೇರೆ ಕಡೆ ಕೊಡಬಹುದು ಎಂದು ಕೊಂಡಿದ್ದೆ. ಶಿವಲಿಂಗೇಗೌಡ ಸಚಿವರಾಗಿದ್ರೆ ಅವರೇ ಉಸ್ತುವಾರಿ ಆಗೋರು. ಮುಂದೆ ಅವರೂ ಸಚಿವರು ಆಗಬಹುದು ಎಂದು ಕೆಎನ್ ರಾಜಣ್ಣ ತಿಳಿಸಿದರು.
Key words: Modi – announcement – 15 lakhs – accounts? – Minister -KN Rajanna.