ಬೆಂಗಳೂರು,ಸೆಪ್ಟಂಬರ್,7,2020(www.justkannada.in): ದೇಶದ ಆರ್ಥಿಕತೆ ಹಾಳಾಗಲು ಮೋದಿ ಸರ್ಕಾರವೇ ಕಾರಣ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಆರ್ಥಿಕ ಕುಸಿತದಿಂದ ದೇಶದಲ್ಲಿ 15 ಕೋಟಿ ಉದ್ಯೋಗ ನಷ್ಟ ಉಂಟಾಗಿದೆ. ಅಡುಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ರದ್ಧು ಸಂಬಂಧ ಸರ್ಕಾರ ಎಲ್ಲಾದಕ್ಕೂ ಕೋವಿಡ್ ಕಾರಣ ನೀಡುತ್ತಿದೆ. ಸರ್ಕಾರದ ಬಳಿ ಹಣವಿಲ್ಲ ಎನ್ನುತ್ತಿದೆ. ಹಣವಿಲ್ಲದಿದ್ದಾಗ ವಿಶ್ವ ಬ್ಯಾಂಕ್ ನಿಂದ ಸಾಲ ತಂದು ಸರಿದೂಗಿಸಬೇಕು. ವಿತ್ತಸಚಿವೆ ಎಲ್ಲದಕ್ಕೂ ಆಕ್ಟ್ ಆಫ್ ಗಾಡ್ ಅಂತಾರೆ. ತಮ್ಮ ವೈಪಲ್ಯ ಮುಚ್ಚಿಕೊಳ್ಳಲು ಈ ರೀತಿ ಹೇಳುತ್ತಾರೆ ಎಂದು ಕಿಡಿಕಾರಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಬಂದರೇ ಸ್ವರ್ಗ ಸೃಷ್ಠಿ ಮಾಡುತ್ತೇವೆ ಎಂದು ಚುನಾವಣೆ ವೇಳೆ ಬಿಜೆಪಿಯವರು ಹೇಳಿದ್ದರು. ಆದರೆ ಈಗ ಇದು ಸ್ವರ್ಗನಾ, ನರಕನಾ..? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆಗೆ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಬಲಿಷ್ಟ ಕಾಯ್ದೆಯನ್ನ ಜಾರಿಗೆ ತನ್ನಿ. ಬಲಿಷ್ಟ ಕಾಯ್ದೆ ತರಲು ನಾವು ಬೆಂಬಲಿಸುತ್ತೇವೆ ಎಂದು ತಿಳಿಸಿದರು.
Key words: Modi government -responsible – country- economy-Former CM -Siddaramaiah