ಬೆಂಗಳೂರು, ಸೆಪ್ಟೆಂಬರ್ 26, 2021 (www.justkannada.in): ಅಮೆರಿಕ ಸರಕಾರ 157 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಹೌದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭೇಟಿಯ ಸಮಯದಲ್ಲಿ ಅಮೆರಿಕವು 157 ಕಲಾಕೃತಿಗಳು ಮತ್ತು ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಹೋರಾಡಲು ತಮ್ಮ ಪ್ರಯತ್ನಗಳನ್ನು ಬಲಪಡಿಸಲು ಬದ್ಧರಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
10ನೇ ಶತಮಾನದ ರೇವಾಂತ ಕಲ್ಲಿನ ವಿಗ್ರಹ, 12ನೇ ಶತಮಾನದ ತಾಮ್ರದ ನಟರಾಜನ ವಿಗ್ರಹ, 11 ಮತ್ತು 14ನೇ ಶತಮಾನದ ಪುರಾತತ್ವ ವಸ್ತುಗಳು ಕಲಾಕೃತಿಗಳು, ಟೆರಾಕೋಟಾ ಹೂದಾನಿ ಜೊತೆಗೆ 45 ಪ್ರಾಚೀನ ವಸ್ತುಗಳನ್ನು ಅಮೆರಿಕ, ಮೋದಿ ಭೇಟಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ.
key words: Modi return from America to India with 157 ancient artifacts