ಬೆಂಗಳೂರು , ಜುಲೈ, 14,2023(www.justkannada.in): ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ಮೋದಿ ಪ್ರಭಾವ ಮಂಕಾಗಿದೆ. ಮೋದಿಯವರು ರಾಜ್ಯದಲ್ಲಿ ಪ್ರಚಾರ ಮಾಡಿದ ಎಲ್ಲಾ ಕಡೆ ಬಿಜೆಪಿ ಹೀನಾಯವಾಗಿ ಸೋತಿರುವುದು ಇದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಬಿಜೆಪಿ ಮತ್ತು ನರೇಂದ್ರ ಮೋದಿಯವರು ಹೇಗೆ ಜನರಿಂದ ದೂರವಾಗುತ್ತಿದೆ, ಜನ ವಿರೋಧಿ ಆಗುತ್ತಿದೆ ಎನ್ನುವುದನ್ನು ಬಿಡಿ ಬಿಡಿಯಾಗಿ ಬಿಚ್ಚಿಟ್ಟರು.
ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 28 ಬಾರಿ ಬಂದರು. ಹಿಂದಿನ ಯಾವ ಪ್ರಧಾನಿಗಳೂ ರಾಜ್ಯಗಳ ಚುನಾವಣೆ ವೇಳೆ ಹೀಗೆ ವರ್ತಿಸಿರಲಿಲ್ಲ. ಉಳಿದ ಪ್ರಧಾನಿಗಳಿಗೆ ದೇಶವನ್ನು ಮುನ್ನಡೆಸುವುದು ಪ್ರಥಮ ಆಧ್ಯತೆ ಆಗಿರುತ್ತಿತ್ತು. ಬರೀ ಚುನಾವಣೆಗಳನ್ನು ಮಾಡುತ್ತಾ ಓಡಾಡುತ್ತಿರಲಿಲ್ಲ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅವರು ರೋಡ್ ಶೋ ನಡೆಸಿದ , ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಮತ್ತು ಸುತ್ತ ಮುತ್ಯಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅತ್ಯಂತ ಬಹುಮತದಿಂದ ಗೆದ್ದಿದೆ. ಹೀಗಾಗಿ ಮೋದಿ ಅವರ ಪ್ರಭಾವ ಮಂಕಾಗುತ್ತಿರುವುದನ್ನು ನೀವು ಒಪ್ಪಿಕೊಳ್ಳಿ. ಇನ್ಮೇಲೆ ಮೋದಿ ಅವರ ಮೇಲೆ ಅವಲಂಬಿತರಾಗಬೇಡಿ ಎಂದು ಬಿಜೆಪಿ ಸದಸ್ಯರಿಗೆ ತಿಳಿಸಿದರು.
ಜನರ ಜೇಬಿನಲ್ಲಿರುವುದನ್ನು ಕಿತ್ತುಕೊಂಡಿರಿ
ಕಾಂಗ್ರೆಸ್ ಗೆಲುವಿಗೆ ಕಾರಣವಾದ ಸಂಗತಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ , “ಕಾಂಗ್ರೆಸ್ ಜನರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ಮು ಘೋಷಿಸಿ ಜಾರಿ ಮಾಡಿತು. ಬಡವರು-ಮಧ್ಯಮ ವರ್ಗದವರ ಜೇಬಿನಲ್ಲಿ ಹಣ ಇದ್ದರೆ ನಾಡಿನ ಆರ್ಥಿಕತೆ ಬೆಳೆಯುತ್ತದೆ ಎನ್ನುವುದು ಕಾಂಗ್ರೆಸ್ ನ ಬದ್ಧತೆ ಮತ್ತು ಸಿದ್ಧಾಂತ. ಆದರೆ ಬಿಜೆಪಿ ಜನರ ಜೇಬಿನಲ್ಲಿರುವ ಹಣ ಕಿತ್ತುಕೊಳ್ಳುವ ಮನಸ್ಥಿತಿ ಹೊಂದಿರುವ ಕಾರಣದಿಂದ ಹೀನಾಯವಾಗಿ ಸೋಲು ಕಾಣಬೇಕಾಯಿತು ಎಂದರು.
ಪಂಪ ಮತ್ತು ಹಿಟ್ಲರ್
ಕನ್ನಡ ಮಣ್ಣಿನ ಸೌಹಾರ್ದ ಪರಂಪರೆಯ 2000 ವರ್ಷಗಳ ಮೌಲ್ಯವನ್ಮು ವಿವರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಂಪ “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನುವ ಮೌಲ್ಯದಿಂದ ಕನ್ನಡ ಸಂಸ್ಕೃತಿಯನ್ನು ಅರಳಿಸಿದರು. ಹೀಗೆ ಪಂಪನಿಂದ ಹಿಡಿದು ಬಸವಣ್ಣನವರನ್ನು ಪ್ರಸ್ತಾಪಿಸಿ ಇವರೆಲ್ಲರ ಆಶಯಗಳೇ ನಮ್ಮ ಸಂವಿಧಾನದಲ್ಲಿದೆ. ಆದರೆ ತಾನು ಮಾತ್ರ ಶ್ರೇಷ್ಠ ಎನ್ನುವ ಹಿಟ್ಲರ್ ಒಬ್ಬ ಮತಾಂಧ. ಆತ ಮನುಷ್ಯ ವಿರೋಧಿ ಎಂದರು.
ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು?
ಹಿಟ್ಲರ್ ತನ್ನ ತಿಕ್ಕಲುತನದಿಂದ ಹೇಗೆ ಮನುಷ್ಯರ ಮಾರಣ ಹೋಮಕ್ಕೆ ಕಾರಣನಾದ ಎಂದು ವಿವರಿಸುತ್ತಿದ್ದಾಗ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳ ಮಾತಿಗೆ ಅಡ್ಡಿಪಡಿಸಿದರು. ಈ ವೇಳೆ ಮುಖ್ಯಮಂತ್ರಿಗಳು, ‘ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು ?” ಎಂದು ಪ್ರಶ್ನಿಸಿದರು.
ENGLISH SUMMARY…
Modi’s influence diminishing
“Why are you angry, if Hitler is blamed?: CM asks BJP
Snatching people’s money- root cause for BJP’s defeat: CM Siddaramaiah
Bengaluru, July 14- The decline of BJP has begun from Karnataka. Prime Minister Narendra Modi’s influence is diminishing. BJP’s loss in in all the places, where Modi campaigned is the proof for this, Chief Minister Siddaramaiah said here today.
He was replying for the discussion on Thanking resolution on Governor’s address in the joint session, in legislative council today. He explained in detail about how BJP and Narendra Modi are moving away from people and becoming anti-people.
During Karnataka assembly elections, Prime Minister Narendra Modi visited State 28 times. None of the previous Prime Ministers followed this trend. Governing the country used to be the priority of other Prime Minister. They never ran around so much during elections.
Congress has won with huge margins in the assembly elections in and around the constituencies where Modi held road show and campaigned for BJP. Therefore you accept that Modi’s charisma is diminishing. He advised BJP not to depend on Modi, henceforth.
Box1
You snatched from people’s pocket
Chief Minister mentions various factors, that resulted in Congress’ victory and said that, “Congress announced and implemented 5 guarantees. Congress believes in the theory that economy will grow only if poor and middle class people have money. But BJP has the mindset to take money away from people’s pocket and this has caused its defeat”.
Box 2
Pampa and Hitler
Chief Minister explained the 2000 year old harmonious tradition of Kannada soil by citing Pampa bloomed kannada culture with the value “Manushya Jati Tanonde Valam” – Human race is one. Our constitution has imbibed the values proposed by Pampa to Basavanna. But Hitler is a dictator, who believed he, alone is the greatest. He is anti-human, said Chief Minister.
Box 3
Why are you angry, if Hitler is blamed?
BJP members obstructed Chief Minister, while explaining how Hitler caused mass homicides due to his eccentricity. Then Chief Minister asked, “Why are you angry, if I blame Hitler”.
Key words: Modi’s- influence –diminishing-CM Siddaramaiah