ಮೈಸೂರು, ಆಗಸ್ಟ್, 27, 202(www.justkannada.in) ; ಕೊರೊನಾ ಆರಂಭವಾದಾಗಿನಿಂದಲೂ ಎಲ್ಲಾ ಸಮಾರಂಭಗಳು ಸರಳವಾಗಿ ನಡೆಸುವಂತ್ತಾಗಿದ್ದು, ಮೊಹರಂ ಹಬ್ಬಕ್ಕೂ ಕೊರೊನಾದ ಬಿಸಿ ತಟ್ಟಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಒಂದೇಡೆಯಾದರೆ, ಹಬ್ಬ, ಹರಿದಿನಗಳು ಒಂದರ ನಂತರ ಒಂದರಂತೆ ಆಗಮಿಸುತ್ತಿವೆ. ಹೀಗಾಗಿ, ಜನರಲ್ಲಿ ಕೊರೊನಾ ತಡೆಗಟ್ಟುವ ದೃಷ್ಟಿಯಿಂದ ಎಚ್ಚರಿಕೆ ವಹಿಸುವಂತೆ ಹಬ್ಬ ಹರಿದಿನಗಳನ್ನು ಸರಳವಾಗಿ ಆಚರಿಸಲು ಸೂಚನೆ ನೀಡಲಾಗುತ್ತಿದೆ.
ಇದೀಗ ಗೌರಿಗಣೇಶ ಹಬ್ಬವು ಸರಳವಾಗಿ ಜರುಗಿದಂತೆ ಮೊಹರಂ ಸಮಯದಲ್ಲಿಯು ಯಾರೂ ಮೆರವಣಿಗೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಮೊಹರಂ ಹಬ್ಬದಂದು ಮೆರವಣಿಗೆಗೆ ಅವಕಾಶ ನೀಡುವಂತೆ ಮುಸ್ಲಿಂ ಧರ್ಮದ ಅನೇಕ ಮುಖಂಡರು ಸುಪ್ರೀಂ ಮೊರೆ ಹೋಗಿದ್ದರು. ಅವರ ಮನವಿಯನ್ನು ಸುಪ್ರೀಂ ತಿರಸ್ಕರಿಸಿದ್ದು, ಮೆರವಣಿಗೆಗೆ ಅವಕಾಶವಿಲ್ಲ ಎಂಬ ಆದೇಶವನ್ನು ನೀಡಿದೆ.
ಕೊರೊನಾ ಸೋಂಕು ವ್ಯಾಪಾಕವಾಗಿ ಹರಡುತ್ತಿರುವುದರಿಂದ ಮೆರವಣಿಗೆ ಮಾಡಲು ಅವಕಾಶ ನೀಡಿದರೆ ಸೋಂಕು ಹರಡುವಿಕೆ ಹೆಚ್ಚಾಗುತ್ತದೆ. ನಂತರ ಕೊರೊನಾ ಹೆಚ್ಚಾದರೆ ಒಂದು ಸಮುದಾಯವನ್ನು ದೂಷಿಸಲಾಗುತ್ತದೆ. ಹೀಗಾಗಿ, ಮೆರವಣಿಗೆ ಮಾಡಲು ಅವಕಾಶವಿಲ್ಲ ಎಂದು ಸಿಜೆಐ ಎಸ್.ಎ.ಬೊಬ್ಡೆ ಹೇಳಿದ್ದಾರೆ.
key words ; Moharam-Corona-Effect-parade-allowed-Supreme-order