ಚಾಮರಾಜನಗರ,ಜುಲೈ,15,2022(www.justkannada.in): ನಿನ್ನೆ ಮಲೈ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹುಂಡಿ ಹಣ ಎಣಿಕೆ ವೇಳೆ ಹಣ ಕಳುವು ಮಾಡಲಾಗಿದೆ ಎಂದು ಪ್ರಾಧಿಕಾರದ ಸಿಬ್ಬಂದಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.
ಪ್ರಾಧಿಕಾರದ ಡಿ ಗ್ರೂಪ್ ನೌಕರ ಪನ್ನೀರ್ ಸೆಲ್ವಂ ಮೇಲೆ ಆರೋಪ ಕೇಳಿ ಬಂದಿದ್ದು ಮಲೆ ಮಹದೇಶ್ವರ ಪ್ರಾಧಿಕಾರದಿಂದ ಸಿಬ್ಬಂದಿ ಮೇಲೆ ದೂರು ನೀಡಿದೆ. ದೂರಿನ ಅನ್ವಯ ಮಲೆ ಮಹದೇಶ್ವರ ಬೆಟ್ಟದ ಪೋಲಿಸರು ಪನ್ನೀರ್ ಸೆಲ್ವಂನನ್ನ ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆತನ ಜೇಬಿನಲ್ಲಿ ಹಣ ಪತ್ತೆಯಾಗಿದೆ 500 ರೂನ 80 ನೋಟು ಪತ್ತೆಯಾಗಿದ್ದು ಇದು ನನ್ನ ಸ್ವಂತ ಹಣ ಕಳ್ಳತನ ಮಾಡಿಲ್ಲ ಎಂಬುವುದು ಬಂಧಿತ ಪನ್ನೀರ್ ಸೆಲ್ವ ವಾದ ಮಾಡಿದ್ದಾನೆ. ಹುಂಡಿ ಹಣ ಎಣಿಕೆ ಮಾಡುವಾಗ ತಮ್ಮ ಖಾಸಗಿ ಹಣ ಹೊಂದಿರಬಾರದು ಎಂಬುವುದು ಪ್ರಾಧಿಕಾರದ ನೀತಿ ಇದೆ. ಎಣಿಕೆ ವೇಳೆ ಪನ್ನೀರ್ ಸೆಲ್ವಂ ವರ್ತನೆಯನ್ನು ಸಿಸಿ ಕ್ಯಾಮರಾದಲ್ಲಿ ಗಮನಿಸಿ ಅನುಮಾನ ವ್ಯಕ್ತವಾಗಿತ್ತು. ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: money theft- Male Mahadeshwara Authority -complains