ನವದೆಹಲಿ,ಜುಲೈ,18,2022(www.justkannada.in): ಇಂದಿನಿಂದ ಸಂಸತ್ ನಲ್ಲಿ ಮುಂಗಾರು ಅಧಿವೇಶನ ಶುರುವಾಗಲಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ.
ಈ ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆ ನಡೆಯಲಿದೆ. ಹಾಗಾಗಿ, ಈ ಮುಂಗಾರು ಅಧಿವೇಶನ ಹೆಚ್ಚಿನ ಮಹತ್ವ ಹೊಂದಿದೆ. ಸಂಸತ್ ಭವನದ ಬಳಿ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ ನಲ್ಲಿ ಅತ್ಯುತ್ತಮ ವಿಚಾರಗಳ ಚರ್ಚೆಯಾಗಬೇಕು. ಎಲ್ಲಾ ವಿಚಾರಗಳನ್ನ ಮುಕ್ತವಾಗಿ ಚರ್ಚೆ ಮಾಡಬೇಕು ಚರ್ಚೆಯಲ್ಲಿ ವಿಪಕ್ಷಗಳು ಕೂಡ ಭಾಗಿಯಾಗಬೇಕು ಎಂದಿದ್ದಾರೆ.
Key words: Monsoon session –Parliament-Prime Minister-Modi