ಮೈಸೂರು,ಜು,1,2019(www.justkannada.in): ಎಲ್ಲ ಅಡೆತಡೆ ಬಳಿಕ ವಿಷ್ಣು ಸ್ಮಾರಕ ಕಾಮಗಾರಿ ಶುರುವಾಗಿರೋದು ಸಂತಸ ತಂದಿದೆ. ಈ ಸ್ಮಾರಕ ಅಭಿಮಾನಿಗಳ ಹಾಗೂ ಸಾರ್ವಜನಿಕರ ಸ್ವತ್ತು ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸಂತಸ ವ್ಯಕ್ತಪಡಿಸಿದರು.
ಇಂದಿನಿಂದ ಡಾ.ವಿಷ್ಣು ಅವರ ಸ್ಮಾರಕ ನಿರ್ಮಾಣ ಕಾಮಗಾರಿ ಮೈಸೂರಿನಲ್ಲಿ ಆರಂಭವಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಹರ್ಷ ವ್ಯಕ್ತಪಡಿಸಿರುವ ಭಾರತಿ ವಿಷ್ಣುವರ್ಧನ್ ಅವರು, 11ಕೋಟಿ ವೆಚ್ಚದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣವಾಗ್ತಿದೆ. ಸರ್ಕಾರದಿಂದ ಈ ಹಣ ಹಂತಹಂತವಾಗಿ ಬಿಡುಗಡೆ ಆಗಲಿದೆ. ಮೊದಲು ನಾವು ಈ ಜಾಗದಲ್ಲಿದ್ದವರಿಗೆ ಮಾನವೀಯತೆಯಿಂದ ಹಣ ಕೊಡ್ತಿವಿ ಅಂದಿದ್ವಿ. ಆದ್ರೆ ಅವ್ರು ಅಂದು ಆಗೋದಿಲ್ಲ ಹೋರಾಟ ಮಾಡ್ತೀವಿ ಅಂದ್ರು. ಆದರೆ ಇದು ಸರ್ಕಾರದ ಜಾಗವಾಗಿದೆ. ಹಾಗಾಗಿ ಈಗ ಅವರಿಗೆ ಮಾನವೀಯತೆಯಿಂದ ಹಣ ಕೊಡುವ ಅವಶ್ಯಕತೆ ಇಲ್ಲ. ನಾವು ಕೊಡೋದಿಲ್ಲ, ಸರ್ಕಾರವೂ ಕೊಡಲ್ಲ ಎಂದರು.
ಈ ಸ್ಮಾರಕ ಅಭಿಮಾನಿಗಳು ಹಾಗೂ ವಿಷ್ಣು ಅವ್ರಿಗೆ ಅರ್ಪಿಸುತ್ತೇವೆ. ವಿಷ್ಣುವರ್ಧನ್ ಅವರ ಕನಸು ಕೂಡ ಇದೆ ಆಗಿತ್ತು. ಎಲ್ಲ ಅಡೆತಡೆ ಬಳಿಕ ಕಾಮಗಾರಿ ಶುರುವಾಗಿರೋದು ಸಂತಸ ತಂದಿದೆ. ಇಲ್ಲಿ ಸ್ಮಾರಕ ಹಾಗೂ ಕಟ್ಟಡ ಹೇಗೆ ನಿರ್ಮಾಣವಾಗುತ್ತೋ. ಹಾಗೆ ಸರ್ಕಾರದಿಂದ ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ. ಈ ಸ್ಮಾರಕ ಅಭಿಮಾನಿಗಳ ಹಾಗೂ ಸಾರ್ವಜನಿಕರ ಸ್ವತ್ತು. ಇಲ್ಲಿ ಫಿಲ್ಮ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮ್ಯೂಸಿಯಂ ಎಲ್ಲವು ಬರಲಿದೆ ಎಂದು ತಿಳಿಸಿದರು.
ಹಾಗೆಯೇ ನಟ, ಡಾವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಮಾತನಾಡಿ, ಮೈಸೂರಿನಲ್ಲಿ ಸ್ಮಾರಕ ಆಗ್ತಿರೋದು ತುಂಬಾನೇ ಖುಷಿಯಾಗಿದೆ. ವಿಷ್ಣು ಅಪ್ಪಾಜಿಯವರ ಕನಸು ಕೂಡ ಇದೇ ಆಗಿತ್ತು. ಇದು ಕೇವಲ ಸ್ಮಾರಕವಲ್ಲ, ಇದೊಂದು ರಾಜ್ಯದ ಮಾಡೆಲ್. ಎಂದು ಬಣ್ಣಿಸಿದರು.
ರಂಗ ತರಬೇತಿಯಿಂದ ಹಿಡಿದು ಸಿನಿಮಾಗೆ ಸಂಬಂಧಿಸಿದ ಎಲ್ಲ ರೀತಿಯ ಟ್ರೈನಿಂಗ್ ಇರತ್ತೆ.ದಕ್ಷಿಣ ಭಾರತದಲ್ಲಿ ಇದೊಂದು ಉತ್ತಮವಾದ ಮ್ಯೂಸಿಮ್ ಆಗಬೇಕಿದೆ. ಅಭಿಮಾನಿಗಳ ಆಶಯದಂತೆ ಅಪ್ಪಾಜಿ ಕನಸು ಇದೀಗಾ ಈಡೇರುತ್ತಿದೆ. 10ವರ್ಷಗಳ ಕಾಲ ನಡೆದ ಹೋರಾಟದ ಫಲ ಇಂದು ದೊರಕಿದೆ. ಸಾಕಷ್ಟು ಹೋರಾಟದ ನಂತರ ಜಾಗ ಸಿಕ್ಕಿದ್ದು, ಯೋಜನೆ ಕೂಡ ಸಿದ್ದವಾಗಿದೆ. ಎರಡು ವರ್ಷದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ಮುಕ್ತಾಯವಾಗಲಿದೆ ಎಂದು ಅನಿರುದ್ಧ್ ಮಾಹಿತಿ ನೀಡಿದರು.
Key words:monument – property – fans – public-Bharathi Vishnuvardhan -happiness – Mysore