ಮೈಸೂರು.ಅಕ್ಟೊಬರ್.30,2020(www.justkannada.in) : ವ್ಯವಸ್ಥೆಯಲ್ಲಿ ನೈತಿಕ ಕರ್ತವ್ಯ ಪ್ರಜ್ಞೆ ಹಾಗೂ ಆದರ್ಶಗಳನ್ನು ಭ್ರಷ್ಟಾಚಾರ ಎಂಬ ಪೆಡಂಭೂತ ಹಾಳು ಮಾಡುತ್ತಿದೆ ಎಂದು ಹೆಚ್ಚುವರಿ ನ್ಯಾಯಾಧೀಶರಾದ ಜಯಶ್ರೀ ಬೇಸರವ್ಯಕ್ತಪಡಿಸಿದರು.
ಜಿಲ್ಲೆಯ ಲೋಕಾಯುಕ್ತ ಇಲಾಖೆ ವತಿಯಿಂದ ಅ.27 ರಿಂದ ನ.5 ರವರೆಗೆ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ “ಜಾಗೃತಿ ಅರಿವು ಸಪ್ತಾಹ-2020” ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಅಧಿಕಾರಿಗಳು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪಾರದರ್ಶಕತೆ ಮತ್ತು ಸ್ವಯಂ ಮೌಲ್ಯಮಾಪನಕ್ಕೆ ಆದ್ಯತೆ ನೀಡಬೇಕು ಎಂದರು.
ಈ ವೇಳೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪಿ.ವಿ.ಸ್ನೇಹ, ಡಿಎಸ್ಪಿ ಗಂಗಾಧರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
key words : Moral-duty-ideals-shattered-corruption-Jayashree- additional judge