ಮಂಡ್ಯ,ಸೆಪ್ಟಂಬರ್,14,2021(www.justkannada.in): ಸರ್ಕಾರ ಮತ್ತು ಇಲಾಖೆಯ ಅನುಮತಿ ಪಡೆಯದೇ ಸರ್ಕಾರಿ ನಿವಾಸದಲ್ಲಿದ್ದ 10ಕ್ಕೂ ಹೆಚ್ಚು ಮರಗಳನ್ನ ಕಡಿಸಿದ್ದಾರೆ. ಜತೆಗೆ ಅನುಮತಿ ಪಡೆಯದೇ ಸರ್ಕಾರಿ ನಿವಾಸ ನವೀಕರಣ ಮಾಡಿರುವ ಆರೋಪ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಅವರ ವಿರುದ್ದ ಕೇಳಿ ಬಂದಿದೆ.
ಯಾರ ಅನುಮತಿಯನ್ನು ಪಡೆಯದೆ ಸರ್ಕಾರಿ ನಿವಾಸದಲ್ಲಿದ್ದ 10ಕ್ಕೂ ಹೆಚ್ಚು ಮರಗಳನ್ನು ಕಡಿಸಿ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಅವರು ಕಾನೂನು ಉಲ್ಲಂಘಿಸಿದ್ದಾರೆ. ಅಲ್ಲದೆ ಮರ ಕಡಿದು, ಸಾಗಿಸಲು ಪೊಲೀಸ್ ವಾಹನ ಹಾಗೂ ತರಬೇತಿ ನಿರತ ಪೊಲೀಸರನ್ನು ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ಎಸ್ಪಿ ಅಶ್ವಿನಿ ಅವರ ವಿರುದ್ಧ ತಿಂಗಳ ಹಿಂದೆಯೂ 50ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಮಾಡಿರುವ ಆರೋಪವಿದೆ. ಪೊಲೀಸ್ ಮೈದಾನದಲ್ಲಿದ್ದ 50ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಮಾಡಿದ್ದಾರೆನ್ನಲಾಗಿದೆ.
ಇನ್ನು ಕೋವಿಡ್ ಸಂಕಷ್ಟದ ವೇಳೆಯೂ ಸರ್ಕಾರದ ಅನುಮತಿ ಪಡೆಯದೇ ಮನೆ, ಕಚೇರಿ ನವೀಕರಣ ಮಾಡಿಸಿರುವ ಆರೋಪವು ಕೇಳಿ ಬಂದಿದೆ. ವಾಸ್ತುಗಾಗಿ ಸರ್ಕಾರಿ ವಸತಿ ಗೃಹದ ಗಾರ್ಡ್ ಕೊಠಡಿ ಧ್ವಂಸ, ಗೇಟ್ ಬದಲಾವಣೆ. ಆಧುನಿಕವಾಗಿ ಕಚೇರಿ, ಮನೆ ನವೀಕರಣ ಸೇರಿ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಕೊವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿರುವುದಲ್ಲದೆ, ಕೋವಿಡ್ ಸಂದರ್ಭದಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಈಹಿನ್ನೆಲೆಯಲ್ಲಿ ಎಸ್ಪಿ ಅಶ್ವಿನಿ ಅವರ ವಿರುದ್ಧ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ENGLISH SUMMARY…
Charges of severing more than 10 trees in govt. residence: Demand for action against Mandya SP
Mandya, September 14, 2021 (www.justkannada.in): Charges have been made against Mandya District Superintendent of Police Dr. Ashwini, for severing more than 10 trees in the government residence premises without getting the permission of either the government or the Department concerned and undertaking renovation works.
It is alleged that the Mandya District SP Dr. Ashwini has violated the law by deciding to sever more than 10 trees inside the government residence premises and also misused her powers by using the police vehicle and duty-bound police personnel to shift the severed trees.
She is also facing earlier charges of severing more than 50 trees in the Police training grounds premises and transporting them about two months ago.
Now it is also alleged that Dr. Ashwini has renovated the government residence and office without taking the permission of the government or the department during the COVID-19 Pandemic period. The government guest house guard room has been demolished and the gate has been changed as per ‘vastu’ demands. Also, she has made modifications to the office and government residence violating the law.
This has also caused a financial burden to the government, especially during the COVID-19 Pandemic time. The public has expressed their ire on this development and has demanded action against SP Dr. Ashwini.
Keywords: Mandya District/ SP Dr. Ashwini/ charges/ severing 10 trees/ renovation/ without permission
Key words: More than -10 trees –cut- government –residence-Mandya SP