ಮೈಸೂರು,ಮೆ,25,2022(www.justkannada.in): ಮಂಗಳೂರಿನ ಮಳಲಿ ಮಸೀದಿ ತಾಂಬೂಲ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ತಾಂಬೂಲ ಪ್ರಶ್ನೆಗಿಂತ ಕೇಶವಕೃಪದಲ್ಲೇ ಎಲ್ಲವೂ ತೀರ್ಮಾನವಾಗುತ್ತದೆ. ಅಲ್ಲಿಂದ ಬರುವ ಸಂದೇಶವನ್ನ ಇವರು ಪಾಲಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಈ ರೀತಿ ವಾತಾವರಣದಿಂದ ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ. ಶಾಂತಿ ಸಾಮರಸ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದ ಹಿತಶತ್ರುಗಳು ಈಗ ನೇರ ಶತ್ರುಗಳಾಗಿದ್ದಾರೆ. ಜೆಡಿಎಸ್ ಹಿತಶತ್ರುಗಳಿಂದ ಕಾಂಗ್ರೆಸ್ ಗೆ ಉಪಯೋಗ ಇಲ್ಲ. ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಅಂತಾ ಕೇಳಿದ್ದಾರೆ. ಮೊದಲು ತಮ್ಮ ಕೊಡುಗೆ ಏನೆಂದು ಸಿದ್ಧರಾಮಯ್ಯ ಹೇಳಲಿ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಕಾಂಗ್ರೆಸ್ ಸರ್ಕಾರದ ಕೊಡುಗೆ. 200 ಕುಟುಂಬವನ್ನ ಅನಾಥರನ್ನಾಗಿ ಮಾಡಿದ್ದು ನಿಮ್ಮ ಕೊಡುಗೆ. ನಾನಿದ್ದರೇ ಮತ್ತಷ್ಟು ಅಭಿವೃದ್ಧಿ ಮಾಡುತ್ತಿದ್ದೆ. ಅಷ್ಟರಲ್ಲಿ ಸರ್ಕಾರ ಕಿತ್ತಾಗಿದ್ದರು ಎಂದು ಕಿಡಿಕಾರಿದರು.
Key words: Mosque –Question-Former CM-HD kumaraswamy-mysore