ಮೈಸೂರು,ಜೂ,6,2020(www.justkannada.in): ಲಾಕ್ ಡೌನ್ ಸಡಿಲ ಮಾಡಿದ ಬಳಿಕ ರಾಜ್ಯದಲ್ಲಿ ವ್ಯಾಪಾರ ವಹಿವಾಟು ಆರಂಭವಾಗಿದ್ದು ಈ ನಡುವೆ ಜೂನ್ 8ಕ್ಕೆ ದೇವಾಲಯಗಳು, ಮಸೀದಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಮೈಸೂರಿನಲ್ಲಿ ಮಸೀದಿಗಳಲ್ಲಿ ಸಕಲ ಸಿದ್ಧತೆ ಮಾಡಲಾಗುತ್ತಿದೆ.
ಮಸೀದಿಗಳನ್ನ ಓಪನ್ ಮಾಡಲು ಸಕಲ ಸಿದ್ದತೆ ಭರದಿಂದ ಸಾಗುತ್ತಿದ್ದು, ಮಸೀದಿಗಳ ಒಳಗಡೆ ಮತ್ತು ಹೊರಗಡೆ ಔಷಧಿ ಸಿಂಪಡಣೆ ಕಾರ್ಯ ನಡೆಯುತ್ತಿದೆ. ಅಗತ್ಯ ಕ್ರಮಗಳನ್ನು ಕೈಗೊಂಡು ಮಸೀದಿ ಓಪನ್ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.
ಮಸೀದಿಗಳಲ್ಲಿ ನಮಾಜ್ ಮಾಡಲು ಕೇವಲ ಒಂದು ತಾಸುಗಳ ಕಾಲ ಮಾತ್ರ ಅವಕಾಶ ನೀಡಲಾಗಿದೆ. ಹಾಗೆಯೇ ಮಸೀದಿಗಳಿಗೆ ಬರುವವರ ಮೇಲೆ ತೀವ್ರ ನಿಗಾ ಇಡುವುದು ಮತ್ತು ಸಾರ್ವಜನಿಕ ಅಂತರ ಕಾಯ್ದುಕೊಂಡು ನಮಾಜ್ ಮಾಡಲು ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಎಲ್ಲಾ ಮುಂಜಾಗ್ರತಾ ಕ್ರಮಕೈಗೊಂಡು ಮಸೀದಿ ಆರಂಭಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಎರಡೂವರೆ ತಿಂಗಳ ಬಳಿಕ ಮಸೀದಿ ಓಪನ್ ಗೆ ಅವಕಾಶ ಸಿಕ್ಕಿರುವ ಹಿನ್ನೆಲೆ ಮುಸಲ್ಮಾನ ಬಂಧುಗಳಲ್ಲಿ ಸಂತಸ ಮೂಡಿದೆ.
Key words: Mosques- Open-june.8-Mysore- Preparation