ನವದೆಹಲಿ:ಜುಲೈ-16:(www.justkannada.in) ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಇಂಜಿನಿಯರ್ ಪದವೀದರರು ಹೊರಬರುತ್ತಾರೆ. ಆದರೆ ಸಾಕಷ್ಟು ಇಂಜಿನಿಯರಿಂಗ್ ಪದವೀಧರರು ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗುತ್ತಿದ್ದಾರೆ. ಇದಕ್ಕೆ ಕಾರಣ ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿನ ಕಡಿಮೆ ಕೌಶಲ್ಯ, ಗುಣಮಟ್ಟ ಕ್ಷೀಣಿಕೆ ಎಂದು ಇತ್ತೀಚಿನ ಸಮೀಕ್ಷೆ ತಿಳಿಸಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಗೆ ಸಲ್ಲಿಸಿದ ಇತ್ತೀಚಿನ ವರದಿಯಲ್ಲಿ, ಶೇಕಡಾ 17.91 ರಷ್ಟು ಎಂಜಿನಿಯರ್‌ಗಳು ಮಾತ್ರ ಸಾಫ್ಟ್ ವೇರ್ ವಲಯದಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.
ಎಐಸಿಟಿಇ ಸಮಿತಿಯ ಅಧ್ಯಕ್ಷರಾಗಿರುವ ಬಿ.ವಿ.ಆರ್ ಮೋಹನ್ ರೆಡ್ಡಿ ಅವರು ನಡೆಸಿದ “ಭಾರತದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಅಲ್ಪ ಮತ್ತು ಮಧ್ಯಮ-ಅವಧಿಯ ದೃಷ್ಟಿಕೋನಗಳು”(Engineering Education in India Short and Medium-term perspectives”) ಎಂಬ ವರದಿ ಪ್ರಕಾರ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ದೋಷಣೆಗಳಿದ್ದು, ಅದು ತೀರಾ ಕಡಿಮೆ ಕ್ರಮಾಂಕದ ಕೌಶಲ್ಯಗಳ ಮೇಲೆ ಕೇಂದ್ರೀಕೃತವಾಗಿದೆ. ಈ ಕಾರಣಕ್ಕಾಗಿ ಭಾರತದಲ್ಲಿ ಲಕ್ಷಾಂತರ ಇಂಜಿನಿಯರ್ ಪದವೀಧರರು ಇನ್ನೂ ನಿರುದ್ಯೋಗಿಗಳಾಗಿಯೇ ಇರುವ ಸ್ಥಿತಿಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2016 ರ ಎಂಜಿನಿಯರ್ಸ್ ರಾಷ್ಟ್ರೀಯ ಉದ್ಯೋಗ ವರದಿ ಪ್ರಕಾರ, ಹಿಂದಿನ ನಾಲ್ಕು ವರ್ಷಗಳಲ್ಲಿ ಎಂಜಿನಿಯರಿಂಗ್ ಪದವೀಧರರ ಉದ್ಯೋಗದಲ್ಲಿ ಗಮನಾರ್ಹ ಸುಧಾರಣೆಯಾಗಿಲ್ಲ.
ದೇಶದ ವಿವಿಧ ರಾಜ್ಯಗಳಲ್ಲಿ 650+ ಎಂಜಿನಿಯರಿಂಗ್ ಕಾಲೇಜಿನಿಂದ 150,000 ಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳು (2015 ರಲ್ಲಿ ಪದವಿ ಪಡೆದ) ಪದವಿ ಪಡೆಯುತ್ತಿದ್ದಾರೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ. AMCAT: Aspiring Minds Computer Adaptive Test ಆಧರಿಸಿ ಇಂಗ್ಲಿಷ್ ಸಂವಹನ, ಪರಿಮಾಣಾತ್ಮಕ ಆಪ್ಟಿಟ್ಯೂಡ್, ಸಮಸ್ಯೆ-ಪರಿಹರಿಸುವ ಕೌಶಲ್ಯಗಳು ಮತ್ತು ಡೊಮೇನ್ ಪ್ರದೇಶಗಳ ಜ್ಞಾನದಂತಹ ವಸ್ತುನಿಷ್ಠ ವಿಷಯಗಳನ್ನು ಮಾತ್ರ ಒಳಗೊಂಡಿರುತ್ತವೆ ಎಂದು ಸಮೀಕ್ಷೆ ಹೇಳಿದೆ.
ಸಾಫ್ಟ್‌ವೇರ್ ಸರ್ವೀಸ್ ಸೆಕ್ಟರ್ ನಲ್ಲಿ ಕೇವಲ 17.91% ಎಂಜಿನಿಯರ್‌ಗಳು ಮಾತ್ರ ಉದ್ಯೋಗದಲ್ಲಿದ್ದಾರೆ. ಸಾಫ್ಟ್‌ವೇರ್ ಪ್ರಾಡಕ್ಟ್ ವಲಯಗಳಲ್ಲಿ 3.67% ಮತ್ತು ಕ್ರಿಯಾತ್ಮಕವಲ್ಲದ ವಲಯಗಳಲ್ಲಿ 40.57% ಇದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಎಂಜಿನಿಯರಿಂಗ್ ವಲಯದ ಉದ್ಯೋಗದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂಬುದು ಸ್ಪಷ್ಟ ಎಂದು ವರದಿ ತಿಳಿಸಿದೆ.