ಒಟ್ಟಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸಾದ ಅಮ್ಮ-ಮಗ!

ಸಕಲೇಶಪುರ: ಎಸ್ಎಸ್​ಎಲ್​​ಸಿ ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ, ಮಗ ಇಬ್ಬರೂ ಉತ್ತೀರ್ಣರಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸಿ.ಎನ್.ತೀರ್ಥ ಹಾಗೂ ಅವರ ಮಗ ಬಿ.ಆರ್. ಹೇಮಂತ್ ತೇರ್ಗಡೆಯಾದ ತಾಯಿ, ಮಗ.

8ನೇ ತರಗತಿಯನ್ನು ಅರ್ಧಕ್ಕೆ ನಿಲ್ಲಿಸಿದ್ದ ತೀರ್ಥ ಅವರು ಬಾಳ್ಳುಪೇಟೆ ರಂಗನಾಥ ಪ್ರೌಢಶಾಲೆ ಶಾಲೆಯಲ್ಲಿ ಖಾಸಗಿಯಾಗಿ ಪರೀಕ್ಷೆ ತಗೆದುಕೊಂಡಿದ್ದರು. ವಳಲಹಳ್ಳಿ ಶ್ರೀ ಮಲ್ಲೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಬಿ.ಆರ್.ಹೇಮಂತ್ 562 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾನೆ. ತೀರ್ಥ ಅವರು 235 ಅಂಕ ಪಡೆದಿದ್ದಾರೆ.

ತೀರ್ಥ ಅವರು ಮಗನ ಪಠ್ಯ ಪುಸ್ತಕಗಳೊಂದಿಗೆ ಅಭ್ಯಾಸ ನಡೆಸಿದ್ದು, ಹೇಮಂತ್ ಕೂಡ ತಾಯಿಯ ಕಲಿಕೆಗೆ ನೆರವಾಗಿದ್ದ. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಬರೆದ ಎಲ್ಲರನ್ನೂ ಉತ್ತೀರ್ಣಗೊಳಿಸಿದ್ದರಿಂದ ತೀರ್ಥ ಅವರು ಉತ್ತೀರ್ಣರಾಗಲು ನೆರವಾಗಿದೆ.

ಮಗನೂ ಎಸ್ಎಸ್ಎಲ್​ಸಿ ಕಲಿಯುತ್ತಿದ್ದರಿಂದ ನಾನು ಪರೀಕ್ಷೆ ಕಟ್ಟಿದೆ. ಅವನೊಂದಿಗೆ ನಾನು ಬಿಡುವಿನ ವೇಳೆ ಓದಿಕೊಳ್ಳುತ್ತಿದ್ದೆ. ನನಗೆ ತಿಳಿದಿದ್ದ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿದ್ದೆ. ಪರೀಕ್ಷೆಗೆ ಹಾಜರಾದವರನ್ನೆಲ್ಲ ಉತ್ತೀರ್ಣಗೊಳಿಸಿದ್ದರಿಂದ ನನಗೂ ನೆರವಾಗಿದೆ ಎನ್ನುತ್ತಾರೆ ಸಿ.ಎನ್.ತೀರ್ಥ.

ENGLISH SUMMARY….

Mother-son duo writes passes SSLC exam together!
Sakaleshpura, August 10, 2021 (www.justkannada.in): A mother and son wrote the SSLC exams together and both of them have passed! They are identified as C.N. Theertha and her son B.R. Hemanth, residents of Lakshmipura village in Sakaleshpura Taluk, Hassan District.
The mother had studied up to 8th standard. She had appeared for the SSLC exams at the Ballupet Ranganatha High School privately. While B.R. Hemanth, her son, who is a student of the Valahalli Sri Malleshwara High School has scored 562 marks, his mother Theertha has scored 235 marks.
It is learnt that the mother had used her son’s books to study and the son had helped her in learning. The State Government had announced to promote all the students who appear for SSLC exams this year due to the COVID-19 Pandemic, which has helped the mother.
Keywords: SSLC exams/ Mother son duo/ pass