ಯಾದಗಿರಿ,ಸೆಪ್ಟಂಬರ,28,2022(www.justkannada.In): ಸಿಡಿಲು ಬಡಿದು ತಾಯಿ,ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಗುರುಮಠಕಲ್ ತಾಲೂಕಿನ ಎಸ್ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. .ಗಾಜರಕೋಟ ಗ್ರಾಮದ ಮೋನಮ್ಮ (25) ಭಾನು (4) ಶ್ರೀನಿವಾಸ್ (2), ಎಸ್ ಹೊಸಹಳ್ಳಿ ಗ್ರಾಮ ಸಾಬಣ್ಣ (17) ಮೃತ ಪಟ್ಟವರು. ಓರ್ವ ಯುವಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಮಧ್ಯಾಹ್ನ ಯಾದಗಿರಿಯಿಂದ ಊರಿಗೆ ಹೋಗುವಾಗ ಸುರಿದ ಮಳೆಯಿಂದಾಗಿ ಸಿಡಲು ಬಡಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗುರುಮಠಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Key words: Mother- children –four-died-rain-yadgir