ಮೈಸೂರು,ಜನವರಿ,6,2025 (www.justkannada.in): ನವಜಾತ ಗಂಡು ಮಗು ಚರಂಡಿಯಲ್ಲಿ ಪತ್ತೆಯಾಗಿದ್ದು, ಆಗ ತಾನೇ ಜನಿಸಿದ ಶಿಶುವನ್ನು ತಾಯಿ ಚರಂಡಿಗೆ ಎಸೆದಿರುವ ಅಮಾನವೀಯ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ರಾಜೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ.
ಮಗು ಕೊರೆವ ಚಳಿಯಲ್ಲಿ ಚರಂಡಿ ನೀರಿನಲ್ಲಿ ರಾತ್ರಿಯೆಲ್ಲಾ ಕಳೆದಿದ್ದು, ಬೆಳಗಿನ ಜಾವ ಮಗುವಿನ ಅಳುವನ್ನು ಗ್ರಾಮದ ಆಶಾ ಕಾರ್ಯಕರ್ತೆ ಗಮನಿಸಿದ್ದಾರೆ. ತಕ್ಷಣವೇ ತಾಯಿ ಮಗುವನ್ನು ಹಾರೈಕೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಆಶಾ ಕಾರ್ಯಕರ್ತೆ ಸರೋಜಮ್ಮ ಹಾಗೂ ಚಂದ್ರಮ್ಮ ಚಿಕಿತ್ಸೆ ಕೊಡಿಸಲು ಮುಂದಾಗಿದ್ದು, ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಅಕ್ರಮ ಸಂಬಂಧದಿಂದ ಜನಿಸಿರುವ ಮಗುವನ್ನು ಸಮಾಜಕ್ಕೆ ಹೆದರಿ ಚರಂಡಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಈ ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Key words: Mother, newborn baby, Sewer, mysore