ಬೆಂಗಳೂರು, ಜೂನ್ 06, 2019 (www.justkannada.in): ಹಿರಿಯ ನಿರ್ದೇಶಕ ಎಸ್. ನಾರಾಯಣ್ ಪ್ರಾಂಶುಪಾಲರಾಗಿರುವ ನವರಸ ನಟನ ಅಕಾಡೆಮಿಯ ಎರಡನೇ ವರ್ಷಕ್ಕೆ ಕಾಲಿಟ್ಟಿರುವ ಸಂರ್ಭದಲ್ಲಿ ತನ್ನ ಎರಡನೇ ಶಾಖೆ ಆರಂಭಿಸುತ್ತಿದೆ.
ಕಲ್ಯಾಣನಗರದಲ್ಲಿ ನವರಸ ನಟನ ಅಕಾಡೆಮಿ ನೂತನ ಶಾಖೆ ಜೂನ್ 10ರಿಂದ ಮೊದಲ ಬ್ಯಾಚ್ ಶುರುವಾಗಲಿದೆ. ಇಲ್ಲಿ ಮೊದಲನೇ ವರ್ಷದಲ್ಲಿ ತರಬೇತಿ ಪಡೆದ ಬಹುತೇಕ ವಿದ್ಯಾರ್ಥಿಗಳು ಈಗಾಗಲೇ ಕಿರುತೆರೆ, ಹಿರಿತೆರೆ ಹಾಗೂ ವೆಬ್ ಸರಣಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವಾರ ಪೂರ್ತಿ ಹಾಗೂ ವಾರಂತ್ಯದ ತರಗತಿಗಳು ನಡೆಯಲಿದ್ದು, ಈ ಶಾಖೆಯಲ್ಲಿ ಆರು ತಿಂಗಳ ಕಾಲ ತರಬೇತಿ ನೀಡಲು ಸಂಸ್ಥೆ ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಈಜು, ನೃತ್ಯ,ಫೈಟಿಂಗ್ ಮತ್ತು ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಜೊತೆಗೆ ಬೀದಿ ನಾಟಕ, ಸಂಕಲನ ಹಾಗೂ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿ ತರಬೇತುಗೊಳಿಸಲಿದ್ದು, ಜೂನ್ 10ರಿಂದ ಮೊದಲನೇ ತಂಡದ ತರಗತಿ ಪ್ರಾರಂಭವಾಗಲಿದೆ.