ಮೈಸೂರು,ಜನವರಿ,03,2021(www.justkannada.in) : ಸಿನಿಮಾದಷ್ಟೇ ಪ್ರೇಕ್ಷಕರ ಆರೋಗ್ಯ ನನಗೆ ಬಹಳ ಮುಖ್ಯ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಸಿನಿಮಾ ನೋಡಿ ಎಂದು ನಟ ರಾಘವೇಂದ್ರ ರಾಜಕುಮಾರ್ ಸಲಹೆ ನೀಡಿದರು.
ಹೊಸವರ್ಷದ ಮೊದಲಚಿತ್ರವಾಗಿ ಬಿಡುಗಡೆಯಾಗಿರುವ ತಾವೇ ಅಭಿನಯಿಸಿರುವ ‘’ರಾಜತಂತ್ರ’’ ಬಿಡುಗಡೆ ಸಿನಿಮಾ ಸಂಬಂಧಪಟ್ಟಂತೆ ಮೈಸೂರಿಗೆ ಆಗಮಿಸಿದ ಅವರು, ನಟ ದಿ.ಡಾ.ರಾಜಕುಮಾರ್ ಉದ್ಯಾನವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸಿನಿಮಾ ಬಿಡುಗಡೆಯಾಗಿದೆ, ಪ್ರೇಕ್ಷಕರ ದರ್ಶನಕ್ಕೆ ಬಂದಿದ್ದೇನೆ. ಜನರು ಸಿನಿಮಾ ನೋಡಿ ಆಶೀರ್ವದಿಸಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಸಿನಿಮಾದಷ್ಟೇ ಪ್ರೇಕ್ಷಕರ ಆರೋಗ್ಯ ನನಗೆ ಬಹಳ ಮುಖ್ಯ. ಕೊರೋನಾ ಮಾರ್ಗಸೂಚಿ ಅನುಸರಿಸಿ ಸಿನಿಮಾ ನೋಡಿ. ನೀವಿದ್ದರೆ ನಾವು. ಈ ವರ್ಷ ದರ್ಶನ್, ಸುದೀಪ್, ಶಿವಣ್ಣ ಅನೇಕರ ಸಿನಿಮಾಗಳು ಬಿಡುಗಡೆಯಾಗಲಿದೆ. ಈ ವರ್ಷ ಎಲ್ಲರ ಆರೋಗ್ಯ ಚನ್ನಾಗಿರಲಿ. ಕಳೆದ ವರ್ಷ ಕಳೆದುಕೊಂಡಿದ್ದು, ಈ ವರ್ಷ ಬರುತ್ತೆ ಯಾರು ನಂಬಿಕೆ ಕಳೆದುಕೊಳ್ಳಬೇಡಿ ಎಂದು ತಿಳಿಸಿದರು.
ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ನಿರ್ಮಿಸಿರುವ, ರಾಜ್ಯ ಪ್ರಶಸ್ತಿ ವಿಜೇತ ನಟ ರಾಘವೇಂದ್ರ ರಾಜಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ರಾಜತಂತ್ರ ಚಿತ್ರ ಹೊಸವರ್ಷದ ಮೊದಲ ದಿನ ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ನಿರ್ದೇಶಕರು ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ. ಸುರೇಶ್ ಸಂಗೀತ ನಿರ್ದೇಶನ, ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ರಾಘವೇಂದ್ರ ರಾಜಕುಮಾರ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ರಂಜನ್ ಹಾಸನ್, ಶಂಕರ್ ಅಶ್ವಥ್, ನೀನಾಸಂ ಅಶ್ವಥ್, ಮುನಿರಾಜು, ವಿಜಯಭಾಸ್ಕರ್, ಪ್ರತಾಪ್ ಸಿಂಹ ಅಗರ, ಶಿವಾನಂದ, ಪ್ರಕಾಶ್ ಕಾರಿಯಪ್ಪ, ವೆಂಕಟೇಶ್ ಪ್ರಸಾದ್, ಹೋಳಿ ವೆಂಕಟೇಶ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್, ಉಮೇಶ್, ಕುಮಾರ್, ಕನ್ನಡ ಪ್ರೇಮ್, ಲಕ್ಷ್ಮಣ್, ಭೀಮ, ಆನಂದ್ ಪನ್ನೇದೊಡ್ಡಿ, ಹೇರಂಭ, ಸತೀಶ್ ಗೌಡ, ಮೀರಾ ಶ್ರೀ ಗೌಡ ರಾಜತಂತ್ರದ ತಾರಾಬಳಗವಾಗಿದೆ.
key words : movie-Audience-health-very important-me-Actor-Raghavendra Rajkumar …!