ಬೆಂಗಳೂರು,ಮೇ,23,2023(www.justkannada.in): ಐದು ವರ್ಷವೂ ಸಿದ್ಧರಾಮಯ್ಯ ಸಿಎಂ ಎಂಬ ಹೇಳಿಕೆ ವಿಚಾರ ಕುರಿತು ಸಚಿವ ಎಂ.ಬಿ ಪಾಟೀಲ್ ಗೆ ಸಂಸದ ಡಿ.ಕೆ ಸುರೇಶ್ ನೇರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಎಂ.ಬಿ.ಪಾಟೀಲ್ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರ ಕೊಡಬಲ್ಲೆ, ಎಚ್ಚರಿಕೆ ಕೊಡಬಲ್ಲೆ. ಆದರೆ ಈಗಲೇ ಅದೆಲ್ಲ ಬೇಡ. ಎಂ.ಬಿ.ಪಾಟೀಲ್ಗೆ ಹೇಳಿ, ಇದೆಲ್ಲ ಬೇಡ ಅಂತಾ. ಎಂ.ಬಿ.ಪಾಟೀಲ್ ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಳಿ ಮಾತನಾಡಲಿ ಎಂದು ಕಿಡಿಕಾರಿದರು.
Key words: MP -DK Suresh – direct warning -Minister -MB Patil