ಬೆಂಗಳೂರಿಗೆ 2ನೇ ಏರ್ ಪೋರ್ಟ್: ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ಡಾ. ಸಿ. ಎನ್ ಮಂಜುನಾಥ್

ನವದೆಹಲಿ, ಫೆಬ್ರವರಿ, 5,2025 (www.justkannada.in): ಇಂದು ನವದೆಹಲಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ. ಸಿ. ಎನ್ ಮಂಜುನಾಥ್ ಅವರು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ 2ನೇ ಏರ್ ಪೋರ್ಟ್ ನ ಅವಶ್ಯಕತೆ ಬಗ್ಗೆ  ಮನವಿ ಮಾಡಿದರು.

ಪ್ರಸ್ತುತ ಬೆಂಗಳೂರು ನಗರ ಇಡೀ ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಬೆಂಗಳೂರಲ್ಲಿ ಸುಮಾರು 750 ಮಲ್ಟಿ ನ್ಯಾಷನಲ್ ಕಂಪನಿಸ್ ಕೂಡ ಇದೆ.  ಹೀಗಾಗಿ ಪ್ರತಿದಿನ ಲಕ್ಷಾಂತರ ಜನ ಬೆಂಗಳೂರಿಗೆ ಬಂದು ಹೋಗುತ್ತಾ ಇದ್ದಾರೆ.  ಈಗ ಇರುವ ಏರ್ಪೋರ್ಟ್ ನಲ್ಲಿ  ಏರ್ ಟ್ರಾಫಿಕ್ ಕಂಡಿಷನ್ ತುಂಬಾ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರಕ್ಕೆ ಎರಡನೆಯ ಏರ್ಪೋರ್ಟ್ ನ ಅವಶ್ಯಕತೆ ಬಹಳ ಇದೆ ಎಂದು ಸಂಸದ ಡಾ. ಸಿ.ಎನ್ ಮಂಜುನಾಥ್ ಅವರು ತಿಳಿಸಿದರು.

ಹಾಗೆಯೇ ಈ ವಿಚಾರವನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಈಗಾಗಲೇ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ  2ನೇ ಏರ್ ಪೋರ್ಟ್ ಗೆ ಒತ್ತಾಯ ಮಾಡಿದ್ದಾರೆ.  ನಾನು ಕೂಡ ಇದಕ್ಕೆ ಧ್ವನಿಗೂಡಿಸುತ್ತಿದ್ದೇನೆ.  ಯಾಕೆಂದರೆ ಬೆಂಗಳೂರಿಗೆ ಎರಡನೆಯ ಏರ್ ಪೋರ್ಟ್ ಅವಶ್ಯಕತೆ ಬಹಳ ಇದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಬಳಿ ಸಂಸದ ಡಾ.ಸಿಎನ್ ಮಂಜುನಾಥ್ ಮನವಿ ಮಾಡಿದರು. ಸಂಸದರ ಮನವಿಗೆ ಅವರು ಇದಕ್ಕೆ ರಾಮ್ ಮೋಹನ್ ನಾಯ್ಡು ಸಕ್ಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

Key words: 2nd airport, Bengaluru:, MP,  Dr. C. N. Manjunath, Union Minister