ಮೈಸೂರು,ಫೆಬ್ರವರಿ,22,2021(www.justkannada.in): ಫೆಬ್ರವರಿ 24(ಬುಧವಾರ)ರಂದು ಮೈಸೂರು ಮೇಯರ್ – ಉಪಮೇಯರ್ ಚುನಾವಣೆ ನಡೆಯಲಿದ್ದು ಈ ಕುರಿತು ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ನಮ್ಮೊಂದಿಗೆ ಜೆಡಿಎಸ್ ನವರು ಬಂದರೆ ಖುಷಿ. ಇಲ್ಲ ಅಂದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಿದ್ದ ಎಂದಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರಗಳು ಇವೆ. ಮೈಸೂರು ಮಹಾನಗರ ಪಾಲಿಕೆಗೆ ಏನು ಕೆಲಸ ಆಗಬೇಕೋ ಅದನ್ನ ಮಾಡಿಸಿಕೊಳ್ಳುತ್ತೇವೆ. ಈ ಹಿಂದೆ ಪಾಲಿಕೆ ಮತ್ತು ಜಿ.ಪಂ ನಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಅನುಭವ ಚೆನ್ನಾಗಿತ್ತು. ಕಳೆದೆರೆಡು ವರುಷದಿಂದ ಜೆಡಿಎಸ್- ಕಾಂಗ್ರೆಸ್ ಮೈತ್ರಿಯಲ್ಲಿ ಏನಾಗ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದನ್ನ ಅರ್ಥಮಾಡಿಕೊಂಡು ಜೆಡಿಎಸ್ ನವರು ಬಿಜೆಪಿಗೆ ಬರಲಿ ಎಂದರು.
ಅಲ್ಲದೆ ಸಚಿವ ಎಸ್ ಟಿ ಸೋಮಶೇಖರ್ ನೇತೃತ್ವದಲ್ಲಿ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
Key words: MP Pratap simha- ready – sit – Opposition-mysore-city corporation