ಮೈಸೂರು, ಜುಲೈ 13, 2020: ಆತ್ಮನಿರ್ಭರ್ ಯೋಜನೆಯಲ್ಲಿ ಭಾರತ ದೇಶ ಸದೃಢವಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಕ್ಷೇತ್ರಕ್ಕು ಆತ್ಮನ ನಿರ್ಭರ್ ಯೋಜನೆಯಡಿ ಹಣ ನೀಡಲಾಗಿದೆ. ಪಡಿತರ ವಸ್ತುಗಳ ಜೊತೆ ಇತರೆ ಯೋಜನೆಗಳಿಗೂ ಹಣ ನೀಡಲಾಗಿದೆ. ಲಾಕ್ಡೌನ್ ವೇಳೆಯಷ್ಟೆ ಅಲ್ಲ ಲಾಕ್ಡೌನ್ ಮುಗಿನ ನಂತರವು ಮೋದಿ ಸರ್ಕಾರ ಜನರ ಜೊತೆ ಇದೆ ಎಂದು ತಿಳಿಸಿದ್ದಾರೆ.
ಆದರೆ ಕೆಲವರು ರಾಜಕೀಯ ಪ್ರೇರಿತರಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಜನರಲ್ಲಿ ಗೊಂದಲಗಳನ್ನು ಹುಟ್ಟು ಹಾಕುತ್ತಿದ್ದಾರೆ. ಪರಿವಾರ, ತಳವಾರ ಸಮುದಾಯಕ್ಕೆ ಎಸ್. ಟಿ ಮೀಸಲಾತಿ ಸೌಲಭ್ಯ ನೀಡುವ ವಿಚಾರದಲ್ಲಿ ಅಧಿಕಾರಿಗಳ ಯಡವಟ್ಟಿನಿಂದ ತೊಂದರೆಯಾಗಿದೆ.
ಪರಿವಾರ, ತಳವಾರ ಸಮುದಾಯಗಳನ್ನು ಎಸ್. ಟಿ. ಗೆ ಸೇರಿಸುವ ಕಾಯ್ದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಹಾಗಾಗಿ ಎಸ್. ಟಿ ಸಮುದಾಯಕ್ಕೆ ನೀಡುತ್ತಿರುವ ಸೌಲಭ್ಯಗಳನ್ನು ಪರಿವಾರ ತಳವಾರ ಸಮುದಾಯದವರಿಗೂ ನೀಡಬೇಕು. ಆದರೆ ಸರ್ಕಾರದ ಕೆಲ ಸಾಮಾಜಿಕ ಜಾಲ ತಾಣಗಳಲ್ಲಿ ಪರಿವಾರ ತಳವಾರ ಸಮುದಾಯದ ಉಲ್ಲೇಖವೇ ಇಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಆಗಿರುವ ಲೋಪವನ್ನು ಸರಿಪಡಿಸಬೇಕು. ಜನರಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಬೇಕು ಎಂದು ತಿಳಿಸಿದ್ದಾರೆ.