ಸಿಎಂ ಸ್ಥಾನದಿಂದ ಬಿಎಸ್ ವೈ ಇಳಿಸಿದ್ದಕ್ಕೆ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಸೋಲು- ಎಂ.ಪಿ ರೇಣುಕಾಚಾರ್ಯ

ಚಿಕ್ಕಮಗಳೂರು,ಮಾರ್ಚ್,8,2025 (www.justkannada.in):   ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದಕ್ಕೆ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಯಿತು ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ,  ಬಿಎಸ್ ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ವೀರಶೈವ ಸಮಾಜದ ಮತಗಳು ದೂರಾದವು ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಇದೇ ಕಾರಣವಾಯಿತು. ನೂರಕ್ಕೆ ನೂರು ಸೋಲಿಗೆ ಕಾರಣವಾಯ್ತು. ಟಿಕೆಟ್ ಕೊಡುವ ಗೊಂದಲ, ಹಿರಿಯರ ಕಡೆಗಣನೆ ಹಾಗೂ ವೀರಶೈವ ಮತಗಳು ದೂರವಾಗಿದ್ದು ಕೂಡ ಸೋಲಿಗೆ ಕಾರಣವಾಗಿದೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವೇದಿಕೆಯ ಮೇಲೆ ಇದ್ದರು. ಯಾರ್ಯಾರು ಏನೇನು ಕೊಟ್ಟರು ಎಂಬ ಬಗ್ಗೆ ಮಾಹಿತಿ ಇಲ್ಲ. ರಾಷ್ಟ್ರೀಯ ನಾಯಕರು ವಿಜಯೇಂದ್ರನನ್ನು ಆಯ್ಕೆ ಮಾಡಿದ್ದಾರೆ ಹೊರತು ನಾವ್ಯಾರು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ. ಯಾರು ಬೇಕಿದ್ದರೂ ದೂರು ಕೊಡಲಿ ಅದಕ್ಕೆ ಹೆಚ್ಚಿನ ಮಹತ್ವ ಕೊಡುವುದಿಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.

Key words: BJP, lost, last election, BSY, CM post, MP Renukacharya