ಮೈಸೂರು,ಜನವರಿ ,15,2021(www.justkannada.in): ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿದ್ದಕ್ಕೆ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಅಸಮಾಧಾನ ಗೊಂಡಿದ್ದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದವೇ ತೀವ್ರ ವಾಗ್ದಾಳಿ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿರುವ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್, ನೂತನ ಸಚಿವ ಸಿ.ಪಿ.ಯೋಗೇಶ್ವರ್ ಪರವೇ ಬ್ಯಾಟ್ ಬೀಸಿದ್ದಾರೆ. ಸರ್ಕಾರ ಬರಲು ವಿಶ್ವನಾಥ್ ರೀತಿ ಯೋಗೇಶ್ವರ್ ಸಹ ಕಾರಣ. ಇವರುಗಳಿಗೆ ಅಸಮಾಧಾನ ಇರೋದು ಸತ್ಯ. ಅಸಮಾಧಾನದ ಬಗ್ಗೆ ಇವರುಗಳು ಕೇಳಿದ್ದು ಸರಿ. ಅವರು ಸಚಿವ ಸ್ಥಾನ ಕೊಟ್ಟಿರೋದು ಸರಿ ಇದೆ. ಇದನ್ನ ಮುಖ್ಯಮಂತ್ರಿಗಳಿಗೆ ಯಾಕೇ ಕೊಟ್ರಿ ಅಂತ ಕೇಳಬಾರದು. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಸಲಹೆ ನೀಡಿದರು.
ಹಾಗೆಯೇ ಹೆಚ್.ವಿಶ್ವನಾಥ್ ಅಸಮಾಧಾನ ಸಂಬಂಧ, ವಿಶ್ವನಾಥ್ ಜೊತೆ ಮಾತನಾಡುತ್ತೇನೆ. ಸದ್ಯ ಕೋಪದಲ್ಲಿದ್ದಾರೆ. ಈಗ ಅವರಿಗೆ ಸಲಹೆ ಕೊಡಲು ಸಾಧ್ಯವಿಲ್ಲ. ಸದ್ಯ ಏನು ಮಾಡಲು ಸಾಧ್ಯವಿಲ್ಲ . ಅವರು ಮಾತಾಡಿ ಮುಗಿಸಿದ ನಂತರ ಮಾತಮಾಡುತ್ತೇನೆ ಎಂದರು.
ಸಚಿವ ಸಂಪುಟ ವಿಸ್ತರಣೆಯಾದಾಗ ಅಸಮಾಧಾನಗಳು ಸಹಜ. ಸಂಪುಟ ವಿಸ್ತರಣೆಯಾದಾಗ ಎಲ್ಲರಿಗೂ ಅವಕಾಶ ಕೊಡಲು ಸಾಧ್ಯವಿಲ್ಲ. ಈ ವೇಳೆ ಅಸಮಾಧಾನ ಉಂಟಾಗುತ್ತೆ. ವಿಶ್ವನಾಥ್ ಅವರು ಎಡವಿದ್ದಾರೆ. ಅವರು ಪಕ್ಷಕ್ಕೆ ಸೇರಬೇಕಾದರೆ ಬೇರೆ ಮಾತುಕತೆಯಾಗಿತ್ತು. ಸಿಎಂ ಮತ್ತು ಅವರಿಬ್ಬರೇ ಮಾತನಾಡಿದ್ರು. ಸ್ಥಾನ ಕೈ ತಪ್ಪಲು ಅನೇಕ ಕಾರಣಗಳಿದೆ. ಅದನ್ನೆಲ್ಲ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಮುಂದೆ ಮುನಿರತ್ನರಿಗೆ ಸಚಿವ ಸ್ಥಾನ ಕೊಡಬೇಕಾಗಿತ್ತು. ನಾಗೇಶ್ ವಿರುದ್ದ ಆರೋಪ ಬಂದಿತ್ತು. ಮುಂದೆ ಮುನಿರತ್ನಗೆ ಅವಕಾಶ ಸಿಗುತ್ತದೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.
ಸಿದ್ದರಾಮಯ್ಯ ಗೋ ಹತ್ಯೆ ವಿಚಾರ ಇಟ್ಟುಕೊಂಡೆ ಚುನಾವಣೆಗೆ ಹೋಗಲಿ…
ಗೋಹತ್ಯೆ, ಬೀಫ್ ಸೇವನೆ ಕುರಿತು ಮಾತನಾಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿರುವ ಸಂಸದ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯ ಗೋ ಹತ್ಯೆ ವಿಚಾರ ಇಟ್ಟುಕೊಂಡೆ ಚುನಾವಣೆಗೆ ಹೋಗಲಿ. ಜನ ಆಗ ಸರಿ ತಪ್ಪನ್ನ ತೀರ್ಮಾನ ಮಾಡ್ತಾರೆ. ಅವರ ಸರ್ಕಾರ ಬಂದರೆ ಈ ಕಾನೂನನ್ನ ವಾಪಸ್ಸು ತೆಗೆದುಹಾಕಬಹುದು. ಇದರ ಸದನದಲ್ಲಿ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ ಎಂದರು.
ನಿಗಮ ಮಂಡಳಿವಿಚಾರದಲ್ಲಿ ಸಿಎಂ ಬಗ್ಗೆ ಈಗಲೂ ಬೇಸರವಿದೆ. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ತಪ್ಪು ಮಾಡಿದ್ದಾರೆ. ನಾನು ಹೇಳಿದ ಒಬ್ಬರಿಗೂ ನಿಗಮ ಮಂಡಳಿ ಸ್ಥಾನ ನೀಡಿಲ್ಲ. ಚುನಾವಣೆಯಲ್ಲಿ ಕೆಲಸ ಮಾಡಿದ ಮುಖಂಡರಿಗೆ ಕಾರ್ಯಕರ್ತರಿಗೆ ಇದು ಬೇಸರ ತಂದಿದೆ ಎಂದು ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ENGLISH SUMMARY….
Ch’Nagar MP V. Srinivas Prasad bats for C.P. Yogeshwar
Mysuru, Jan. 15, 2021 (www.justkannada.in): BJP MP from Chamarajanagara Lok Sabha Constituency V. Srinivas Prasad has defended the party’s move in including C.P. Yogeshwar in the cabinet.
Addressing a press meet held in Mysuru today he said, “Yogeshwar has also contributed for BJP to come into power like H. Vishwanath. It is true that these people are disgruntled. It is also correct that they are questioning the injustice made to them. But I would also like to clarify that C.P. Yogeshwar also deserves it. These people shouldn’t question the Chief Minister, it is left to the CM.
“It is impossible to give a chance to everyone during the cabinet expansion process. Some people have to sacrifice and be contended. There are many reasons for not giving him a place in the cabinet. It cannot be said in public. Muniratna will also get a chance in the coming days,” he said.
Keywords: V. Srinivas Prasad/ Ch’Nagar MP/ C.P. Yogeshwar/ defend
Key words: MP- Shrinivas Prasad-mysore-batting-minister-CP Yogeshwar-MLC-H.Vishwanath