ಮೈಸೂರು,ಆಗಸ್ಟ್,6,2021(www.justkannada.in): ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಘೋಷಣೆ ಮಾಡಿದ್ದಾರೆ.
ಸಂಸದ ಶ್ರೀನಿವಾಸ್ ಪ್ರಸಾದ್ 75ನೇ ವರ್ಷದ ಹುಟ್ಟಹಬ್ಬವಾಗಿದ್ದು, ಮೈಸೂರಿನಲ್ಲಿ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, 50 ವರ್ಷದ ನನ್ನ ರಾಜಕೀಯ ಜೀವನದ ಪುಸ್ತಕ ಬಿಡುಗಡೆಯಾಗುತ್ತಿದೆ. ಇದರಲ್ಲಿ ನನ್ನ ರಾಜಕೀಯ ಜೀವನದ ಎಲ್ಲ ಏಳು ಬೀಳು ದಾಖಲಿಸಿದ್ದೇನೆ. ನಾನು ಆತ್ಮ ತೃಪ್ತಿಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದರು.
ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆ. ಆದರೆ ರಾಜಕೀಯ ಬೆಳವಣಿಗೆ ಬೇರೆಯಾದ ಕಾರಣ ಮತ್ತೇ ಸ್ಪರ್ಧೆ ಮಾಡಿದ್ದೆ. ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಈ ಮಾತಿನಿಂದ ಹಿಂದೆ ಸರಿಯುವುದು ಇಲ್ಲ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ENGLISH SUMMARY…
MP Srinivas Prasad announces retirement from electoral politics
Mysuru, August 6, 2021 (www.justkannada.in): Veteran politican, Chamarajanagara MP V. Srinivas Prasad has announced that he is retiring from electoral politics.
Speaking on the occasion of his 75th birthday in Mysuru today, he informed that a book on his 50-year long political journey is being released, which covers his entire political journey including his success and failures. “I am retiring from electoral politics with satisfaction in my heart,” he said.
“I had made my mind to retire about four years ago. But, under certain political developments, I had to contest again. But I won’t contest in elections again. Also I won’t withdraw my words,” he added.
Keywords: V. Srinivas Prasad/ MP/ Chamarajanagara/ retire/ electoral politics
Key words: MP -Srinivas Prasad -announces – retirement – electoral- politics.