ಮೈಸೂರು, ನವೆಂಬರ್, 25,2020(www.justkannada.in): ಸಂಪುಟ ವಿಸ್ತರಣೆ ಹಾಗೂ ಪುನರರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ದ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿ ಸಿಎಂ ಬಿಎಸ್ ವೈ ವಿರುದ್ದ ಬಹಿರಂಗವಾಗಿ ಆಕ್ರೋಶ ಹೊರಹಾಕಿದ ಸಂಸದ ಶ್ರೀನಿವಾಸ್ ಪ್ರಸಾದ್, ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರ ಇತ್ತು. ಈಗ ಸಿಎಂ ಆದ್ರಲ್ಲ ಇನ್ನೇನು ಆ ದರ್ದು ಅವರಿಗೆ ಇಲ್ಲ. ಈಗ ಆರಾಮಾಗಿ ಇದ್ದಾರೆ. ಮುಂದೆ ನೋಡ್ಕೋತಿವಿ ಬಿಡಿ ಎಂದು ಸಿಎಂ ವಿರುದ್ದ ಬೇಸರ ಹೇಳಿಕೆ ನೀಡಿದರು.
ಸಂಪುಟ ವಿಸ್ತರಣೆ ವಿಚಾರ ನಿಮ್ಮ ಸಲಹೆ ಪಡೆದಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಈ ರೀತಿ ಸಂಸದ ಶ್ರೀನಿವಾಸ್ ಪ್ರಸಾದ್ ಖಾರವಾಗಿ ಪ್ರತಿಕ್ರಿಯಿಸಿದರು.
ನಾನು ಕೇಂದ್ರದಲ್ಲಿ ಸಚಿವಸ್ಥಾನದ ಆಕಾಂಕ್ಷಿಯಲ್ಲ…
ಶ್ರೀನಿವಾಸ್ ಪ್ರಸಾದ್ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವಂತೆ ಶಾಸಕ ಹರ್ಷವರ್ಧನ್ ಮನವಿ ಕುರಿತು ಪ್ರತಿಕ್ರಿಯಿಸಿದ ಸಂಸದ ಶ್ರೀನಿವಾಸ್ ಪ್ರಸಾದ್, ಮಂತ್ರಿ ಪಟ್ಟವನ್ನ ನಾನೇ ಬೇಡ ಎಂದಿದ್ದೇನೆ. ಚುನಾವಣೆಯನ್ನೆ ಬೇಡ ಎಂದಿದ್ದವನು ನಾನು. ಇನ್ನು ಮಂತ್ರಿ ಪಟ್ಟ ಯಾಕೆ ಬೇಕು ನನಗೆ. ನಾನು ಕೇಂದ್ರದಲ್ಲಿ ಸಚಿವಸ್ಥಾನದ ಆಕಾಂಕ್ಷಿಯಲ್ಲ ಎಂದರು.
ಹಳೆ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಶ್ರೀನಿವಾಸ್ ಪ್ರಸಾದ್, ಅಳಿಯ ಶಾಸಕ ಹರ್ಷವರ್ಧನ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡೋಲ್ಲ. ಹರ್ಷವರ್ಧನ್ ಹೇಳಿಕೆ ವೈಯುಕ್ತಿಕ. ಹಳೆ ಮೈಸೂರು ಭಾಗಕ್ಕೆ ಈಗ ಸಾಕಾಗುವಷ್ಟು ಮಂತ್ರಿ ಸ್ಥಾನ ಇದೆ. ಸಿಎಂ ಹಳೆ ಮೈಸೂರು ಭಾಗದವರೇ. ಈಶ್ವರಪ್ಪ, ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಹಳೆಮೈಸೂರಿನವರೇ. ಇನ್ನೆಷ್ಟು ಜನರನ್ನ ಗುಡ್ಡೆ ಹಾಕಿಕೊಳ್ತಿರಾ ಹೇಳಿ ಎಂದು ಟೀಕಿಸಿದರು.
English summary….
MP Srinivas Prasad expresses displeasure on CM BSY
Mysuru, Nov. 25, 2020 (www.justkannada.in): Chamarajanagar MP Srinivas Prasad today openly expressed his displeasure on Chief Minister B.S. Yedyurappa over cabinet expansion and reshuffling.
He expressed his frustration on CM BSY at Mysuru, stating that he was instrumental in making Yedyurappa as Chief Minister. “As he is the Chief Minister now he doesn’t care for people like us anymore. We will show him what we are in the future,” he said.
In his reply to a question on MLA Harshvardhan’s appeal to the Govt. of India to make Srinivas Prasad a central Minister he said “In fact, I was offered a berth, but I rejected it myself. I had no intention of fighting the election, why would I like to become a Minister now. I am not in the race to become a Minister,” he clarified.
Keyword: MP Srinivas Prasad-CM BSY
Key words: MP- Srinivas Prasad-displeasure- mysore- cabinet- expension-CM BS yeddyurappa