ಮೈಸೂರು,ಜುಲೈ,26,2021(www.justkannada.in): ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದ ಬೆನ್ನಲ್ಲೆ ಯಡಿಯೂರಪ್ಪ ಭ್ರಷ್ಟಮುಖ್ಯಮಂತ್ರಿ ಹಾಗೂ ಮುಂದೆ ಬರುವವರು ಭ್ರಷ್ಟರೇ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯ ಇವರೊಬ್ಬರೆ ಪ್ರಾಮಾಣಿಕರಾ.? ಹಾಗಾದರೆ ಬೇರೆ ಯಾರನ್ನು ಸಿಎಂ ಮಾಡಬಾರದಾ.?ಜವಬ್ದಾರಿಯುತ ಮಾತನಾಡುವುದನ್ನು ಇನ್ನು ಸಿದ್ದರಾಮಯ್ಯ ಕಲಿತಿಲ್ಲ. ಅವರು ಬಾಲಿಷ ಹೇಳಿಕೆಗಳನ್ನು ಕೊಡತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿಎಂ ಆಗಿದ್ದುಕೊಂಡೆ ಚುನಾವಣೆಯಲ್ಲಿ ಸೋತರು. ಮಂತ್ರಿಗಳೆಲ್ಲ ಉದುರಿಯೋದರು. ಬಾದಾಮಿಯಲ್ಲಿ ಸೋತಿದ್ದರೆ ಸಿದ್ದರಾಮಯ್ಯ ಸ್ಥಿತಿ ಏನಾಗುತಿತ್ತು. ಇವರು ವಿರೋಧ ಪಕ್ಷದ ನಾಯಕ ಹೇಗಾಗಿದ್ದಾರೆ ಎಂಬುದು ಗೊತ್ತು. ನಾನೊಬ್ಬ ಹಿರಿಯ ನಾಯಕನಾಗಿದ್ದೆ. ನನ್ನನ್ನ ವ್ಯವಸ್ಥಿತವಾಗಿ ತುಳಿದರು. ಇದಕ್ಕೆ ಪ್ರತಿಯಾಗಿ ತಕ್ಕ ಪಾಠ ಕಲಿಸಿದ್ದೇನೆ.ಇವರ ಹೇಳಿಕೆಗಳೆಲ್ಲ ಬಾಲಿಷ ಎಂದು ಸಿದ್ದರಾಮಯ್ಯ ವಿರುದ್ಧ ವಿ.ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು.
ವಿಶೇಷ ಪ್ರಕರಣವಾಗಿರುವ ಕಾರಣ ಯಡಿಯೂರಪ್ಪರಿಗೆ ಅಧಿಕಾರ ಕೊಡಲಾಗಿತ್ತು.
ಸಿಎಂ ರಾಜೀನಾಮೆ ಬಗ್ಗೆ ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಹೈಕಮಾಂಡ್ ಸ್ಪಷ್ಟ ನಿಲುವಿದೆ. 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ.ವಿಶೇಷ ಪ್ರಕರಣವಾಗಿರುವ ಕಾರಣ ಯಡಿಯೂರಪ್ಪರಿಗೆ ಅಧಿಕಾರ ಕೊಡಲಾಗಿತ್ತು. ಈ ವಿಚಾರ ಎಲ್ಲರಿಗು ಗೊತ್ತಿರುವಂತದ್ದೆ. ವಯಸ್ಸಿನ ಕಾರಣದಿಂದಲೇ ಅಡ್ವಾಣಿಯಂತವರಿಗೆ ಅಧಿಕಾರ ಕೊಡಲಿಲ್ಲ. ಹೈಕಮಾಂಡ್ ಗೆ ಈ ಬಗ್ಗೆ ಸ್ಪಷ್ಟ ನಿಲುವಿದೆ. ಯಡಿಯೂರಪ್ಪ ಭಾವುಕರಾಗುವುದು ಸಹಜ. ಅವರು ಉತ್ತಮ ಆಡಳಿತ ನೀಡಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ಉತ್ತಮವಾಗಿ ನಡೆಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಯಡಿಯೂರಪ್ಪನವರೆ ಹೇಳಿದ್ದಾರೆ. ಮೂರನೇ ವ್ಯಕ್ತಿಗಳು ಈ ಬಗ್ಗೆ ಮಾತನಾಡಬಾರದು. ಕಾಂಗ್ರೆಸ್ ನವರು ಕೂಡ ಈ ಬಗ್ಗೆ ಮಾತನಾಡಬಾರದು. ಇದು ಬಿಜೆಪಿಯ ಆಂತರಿಕ ವಿಚಾರ. ಇಲ್ಲಿ ಹೈಕಮಾಂಡ್ ಸ್ಪಷ್ಟ ನಿರ್ಧಾರ ಇದೆ ಎಂದರು.
Key words: MP-Srinivas Prasad- former CM- Siddaramaiah – BS Yeddyurappa- corrupt -chief minister