ಮೈಸೂರು,ಫೆಬ್ರವರಿ,07,2021(www.justkannada.in) : ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಸಂಸದ ಶ್ರೀನಿವಾಸ್ ಪ್ರಸಾದ್ ಗೆ ಕೆಲಸ ಮಾಡಲು ಇದು ಗೊಲ್ಡನ್ ಅಪರ್ಚ್ಯೂನಿಟಿ ಎಂದು ಮಾಜಿ ಸಂಸದ ಆರ್.ಧ್ರುವನಾರಯಣ್ ಹೇಳಿದರು.
ಶ್ರೀನಿವಾಸ್ ಪ್ರಸಾದ್ ಅವರು, ಹಿಂದೆ ಕಾಂಗ್ರೆಸ್ ಇಂದ ೫ ಬಾರಿ ಈಗ ಬಿಜೆಪಿಯಿಂದ ಒಂದು ಬಾರಿ ಸಂಸದರಾಗಿ ಅವರನ್ನ ಜನ ಆಯ್ಕೆ ಮಾಡಿದ್ದಾರೆ. ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಕ್ಷೇತ್ರದ ಅಭಿವೃದ್ಧಿ ಮಾಡಲು ಒಳ್ಳೆಯ ಅವಕಾಶ. ಇದನ್ನ ಹಿರಿಯ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಗೆ ಹೇಳುವಷ್ಟು ದೊಡ್ಡವನು ನಾನಲ್ಲ ಎಂದಿದ್ದಾರೆ.
ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿವೆ. ಅವುಗಳಿಗೆ ಹಣ ಬಿಡುಗಡೆ ಮಾಡಿಸಿ ಕೆಲಸ ಮಾಡಿಸಿದ್ರೆ ಸಾಕು. ಅಭಿವೃದ್ಧಿ ಮಾಡಲು ಅವರಿಗೆ ಇನ್ನೂ ಕಾಲವಕಾಶ ಇದೆ. ಕ್ಷೇತ್ರದಲ್ಲಿ ನಮ್ಮ ಯೋಜನೆಗಳನ್ನೆ ಮುಂದುವರೆಸಿಕೊಂಡು ಹೋದರೆ ಸಾಕು ಎಂದು ಹೇಳಿದ್ದಾರೆ.
ಯೂತ್ ಕಾಂಗ್ರೆಸ್ ಚುನಾವಣೆ ಪಾರದರ್ಶಕವಾಗಿ ನಡೆದಿದೆ
ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಆಕ್ರಮ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚುನಾವಣೆ ಪಾರದರ್ಶಕವಾಗಿ ನಡೆದಿದೆ. ಈ ಹಿಂದೆ ನಾಮ ನಿರ್ದೇಶನ ಮಾಡಲಾಗುತ್ತಿತ್ತು. ಈ ಬಾರಿ ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಅಂತ ಹೈಕಮಾಂಡ್ ಸೂಚನೆ ನೀಡಿತ್ತು. ಹಾಗಾಗಿ ಚುನಾವಣೆ ನಡೆಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆಧಿಕಾರಿಗಳ ಸಮ್ಮುಖದಲ್ಲೆ ಚುನಾವಣೆ ನಡೆಯಿತು. ಇದರಲ್ಲಿ ಯಾವುದೇ ಆಕ್ರಮ ಗೊಂದಲ ಇಲ್ಲ. ಚುನಾವಣೆ ಆಕ್ರಮ ಆರೋಪ ಮೈಸೂರಿನಲ್ಲಿ ಪ್ರತಿಭಟನೆ ಮಾಡಿದವರನ್ನೂ ಕರೆದು ಬುದ್ದಿ ಹೇಳಿದ್ದೇವೆ. ಸೋತವರಿಗೆ ರಾಜ್ಯ ಪದಾಧಿಕಾರಿಗಳ ನೇಮಕಕ್ಕೆ ಹೆಸರು ಕಳುಹಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದ್ದಾರೆ.
key words : MP Srinivas Prasad-work-Golden-Opportunity-Former MP-R. Dhruvanarayan