ಮಂಡ್ಯ,ಸೆಪ್ಟಂಬರ್,3,2022(www.justkannada.in): ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಪರೋಕ್ಷವಾಗಿ ಜೆಡಿಎಸ್ ಶಾಸಕರ ಶಾಸಕರ ವಿರುದ್ದ ಕಮಿಷನ್ ಆರೋಪ ಮಾಡಿದ್ದಾರೆ.
ಟೆಂಡರ್ ಆಗ್ತಿದಂತೆ ಕಮಿಷನ್ ಕೇಳ್ತಾರೆ. ಕಮಿಷನ್ ಕೊಡುವವರೆಗೂ ಕೆಲಸ ಮಾಡಲು ಬಿಡಲ್ಲ. ಗುತ್ತಿಗೆದಾರರಿಂದ ನೇರವಾಗಿ ಮಾಹಿತಿ ಬಂದಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಸುಮಲತಾ ಅಂಬರೀಶ್, ಟೆಂಡರ್ ಆಗ್ತಿದಂತೆ ಕಮಿಷನ್ ಕೇಳುತ್ತಾರೆ. ಕಮಿಷನ್ ಕೊಡುವವರೆಗೂ ಕೆಲಸ ಮಾಡೋಕೆ ಬಿಡಲ್ಲ. ಸೆಂಟ್ರಲ್ ಫಂಡ್ ಗೂ ಶಾಸಕರು ಕೈ ಹಾಕ್ತಾರೆ. ಆದರೆ ಗುತ್ತಿಗೆದಾರರು ಮುಂದೆ ಬಂದು ಹೇಳಲು ಹೆದರುತ್ತಿದ್ದಾರೆ. ಟಾರ್ಗೆಟ್ ಮಾಡ್ತಾರೆ ಅಂತ ಹೆದರಿಕೊಳ್ಳುತ್ತಿದ್ದಾರೆ. ಕಮಿಷನ್ ಕೇಳೋದು ಅಪರಾಧ. ಎಷ್ಟು ಅಂತಾ ಹೋರಾಟ ಮಾಡೋದು. ವ್ಯವಸ್ಥೆ ಬದಲಿಸಲು ಒಬ್ಬರಿಂದ ಸಾಧ್ಯಾನಾ..? ಎಂದು ಪ್ರಶ್ನಿಸಿದ್ದಾರೆ.
Key words: MP -Sumalatha Ambarish – accused – commission –against-MLAs.